ನವದೆಹಲಿ: ‘ಸಂವಿಧಾನದಲ್ಲಿ ಉಲ್ಲೇಖವಾಗಿರುವಂತೆ ಪಠ್ಯಪುಸ್ತಕಗಳಲ್ಲಿಯೂ ಪರ್ಯಾಯವಾಗಿ ‘ಭಾರತ’ ಅಥವಾ ‘ಇಂಡಿಯಾ’ ಅನ್ನು ಬಳಸಲಾಗುತ್ತದೆ. ಈ ಕುರಿತ ಚರ್ಚೆ ನಿಷ್ಪ್ರಯೋಜಕ’ ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಪ್ರತಿಕ್ರಿಯಿಸಿದೆ.

ಪಿಟಿಐ ಸುದ್ದಿಸುಂಸ್ಥೆಯ ಜೊತೆಗೆ ಮಾತನಾಡಿರುವ ಎನ್ಸಿಇಆರ್ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ‘ಪಠ್ಯಗಳಲ್ಲಿ ಈ ಎರಡೂ ಪದಗಳನ್ನು ಬಳಸಲಾಗುತ್ತದೆ. ‘ಭಾರತ’ ಅಥವಾ ‘ಇಂಡಿಯಾ’ ಪದವನ್ನು ಎನ್ಸಿಇಆರ್ಟಿ ತಿರಸ್ಕರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎರಡನ್ನೂ ಬಳಸಬಹುದು. ನಮ್ಮ ಸಂವಿಧಾನದಲ್ಲಿ ಹೇಳಿರುವುದನ್ನು ಎತ್ತಿಹಿಡಿಯುವುದು ನಮ್ಮ ಕೆಲಸ. ನಾವು ಭಾರತ ಅಥವಾ ಇಂಡಿಯಾ ಬಳಸಬಹುದು. ಅದರಲ್ಲಿ ಸಮಸ್ಯೆ ಏನಿದೆ? ಈ ಕುರಿತ ಚರ್ಚೆಯಲ್ಲಿ ನಾವು ಭಾಗಿಯಾಗುವುದಿಲ್ಲ. ಯಾವುದು ಸೂಕ್ತವೋ ಅದನ್ನು ಬಳಸುತ್ತೇವೆ’ ಎಂದು ಸಕ್ಲಾನಿ ಅವರು ಹೇಳಿದರು’ ಎಂದು ಹೇಳಿದರು.

‘ಈಗಾಗಲೇ ಈ ಎರಡು ಪದಗಳನ್ನು ಪಠ್ಯಪುಸ್ತಕದಲ್ಲಿ ಬಳಸಿದ್ದೇವೆ. ಹೊಸ ಪಠ್ಯದಲ್ಲಿಯೂ ಇದು ಮುಂದುವರಿಯಲಿದೆ’ ಎಂದರು.

ಕಳೆದ ವರ್ಷ 1ರಿಂದ 12ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಎಂಬ ಹೆಸರಿನ ಬದಲು ‘ಭಾರತ’ ಎಂಬ ಹೆಸರನ್ನು ಬಳಸಬೇಕು ಎಂದು ಎನ್ಸಿಇಆರ್ಟಿಯು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ರಚಿಸಿದ್ದ ಉನ್ನತಮಟ್ಟದ ಸಮಿತಿ ಶಿಫಾರಸು ಮಾಡಿತ್ತು.

ದೇಶದಾದ್ಯಂತ ಇದು ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು.

ಅಲ್ಲದೇ ಜಿ20 ಶೃಂಗಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆಗಳಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಕೇಂದ್ರ ಸರ್ಕಾರವು ನಮೂದಿಸಿತ್ತು. ನಂತರ, ಜಿ20 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಎದುರಿನ ನಾಮಫಲಕದಲ್ಲಿ ‘ಇಂಡಿಯಾ’ ಬದಲು ‘ಭಾರತ’ ಎಂದು ಬರೆಯದಿದ್ದನ್ನು ಇಲ್ಲಿ ಸ್ಮರಿಸಬೇಕು.
.ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ: ಎನ್ಸಿಇಆರ್ಟಿ ಶಿಫಾರಸು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.