ಸೋಹ್ನಾ (ಹರಿಯಾಣ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಹರಿಯಾಣದಲ್ಲಿ ಸಾಗುತ್ತಿದೆ. ಶುಕ್ರವಾರ ಮುಂಜಾನೆ ಸೋಹ್ನಾದ ಖೇರ್ಲಿ ಲಾಲಾದಿಂದ ಯಾತ್ರೆ ಪ್ರಾರಂಭವಾಯಿತು.

ಹಲವು ಕಾಂಗ್ರೆಸ್ ನಾಯಕರು, ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಬಾವುಟ ಹಿಡಿದುಕೊಂಡು ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದರು. ಈ ನಡುವೆ ಮುಸ್ಲಿಂ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಶಿವನ ವಿಗ್ರಹ ನೀಡಿದ್ದು ವಿಶೇಷವಾಗಿತ್ತು.

ಬುರ್ಖಾಧಾರಿ ಮುಸ್ಲಿಂ ಮಹಿಳೆಯೊಬ್ಬರು, ಶಿವನ ವಿಗ್ರಹವನ್ನು ರಾಹುಲ್ ಗಾಂಧಿಗೆ ನೀಡಿದರು. ಈ ಫೋಟೋವನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಈಶ್ವರ್ ಅಲ್ಲಾ ತೇರೋ ನಾಮ್‘ ಎಂದು ಬರೆದುಕೊಂಡಿದೆ.

ಬುಧವಾರ ಯಾತ್ರೆಯು ಹರಿಯಾಣ ಪ್ರವೇಶ ಮಾಡಿದ್ದು, ಶನಿವಾರ ದೆಹಲಿಗೆ ಪ್ರವೇಶ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.