ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಥವಾ ಎಲ್ಲರೂ ಪ್ರೀತಿಯಿಂದ ಕರೆಯುವ ‘ಮುನ್ನಾ ಬಾಬು’ ಅವರ ಜೀವನ ಚರಿತ್ರೆಯು ಅವರ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಹೊಳಹುಗಳನ್ನು ತೆರೆದಿಡಲಿದೆ.

‘ನಿತೀಶ್ ಕುಮಾರ್: ಅಂತರಂಗ್ ದೋಸ್ತೋಂಕಿ ನಝರ್ ಸೆ’ (ನಿತೀಶ್ ಕುಮಾರ್: ಅಂತರಂಗ ಸ್ನೇಹಿತರ ದೃಷ್ಟಿಯಲ್ಲಿ) ಪುಸ್ತಕವನ್ನು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಪಟ್ನಾದಲ್ಲಿ ಜುಲೈ 3ರಂದು ಬಿಡುಗಡೆ ಮಾಡಲಿದ್ದಾರೆ’ ಎಂದು ರಾಜ್‌ಕಮಾಲ್ ಪ್ರಕಾಶನ ತಿಳಿಸಿದೆ.

ನಿತೀಶ್ ಕುಮಾರ್ ಅವರ ಆಪ್ತ ಸ್ನೇಹಿತರೊಬ್ಬರಿಂದ ಕತೆಗಳನ್ನು ಸಂಗ್ರಹಿಸಿ ಲೇಖಕ ಉದಯ್ ಕಾಂತ್ ಅವರು ಈ ಜೀವನ ಚರಿತ್ರೆಯನ್ನು ಬರೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂತ್ ಅವರು, ‘ಸಾಮಾನ್ಯವಾಗಿ ನಾಯಕರ ಜೀವನ ಚರಿತ್ರೆಯು ಅವರ ರಾಜಕೀಯ ಜೀವನದ ಸುತ್ತವೇ ಸುತ್ತುತ್ತದೆ. ಆದರೆ ಇದು ನಗರವೊಂದರ ಪುಟ್ಟ ಗಲ್ಲಿಯಿಂದ ಆರಂಭವಾಗಿ ಅವರ ಹೋರಾಟ, ಪ್ರಸ್ತುತ ಸ್ಥಾನದ ವರೆಗಿನ ಪಯಣವನ್ನು ಒಳಗೊಂಡಿದೆ’ ಎಂದು ತಿಳಿಸಿದರು. ಪುಸ್ತಕವು ಸ್ವಾತಂತ್ರ್ಯೋತ್ತರ ಬಿಹಾರದ ರಾಜಕೀಯ ಪರಿಸ್ಥಿತಿಯನ್ನೂ ದಾಖಲಿಸಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.