ಪಟ್ನಾ: ಇತ್ತೀಚೆಗೆ ನೇಮಕಗೊಂಡ ಶಿಕ್ಷಕರ ಪೈಕಿ ಕೆಲವರು ಅಕ್ರಮವಾಗಿ ಕೆಲಸ ಪಡೆದಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸುಮಾರು ಒಂದು ಲಕ್ಷ ಶಿಕ್ಷಕರ ದಾಖಲಾತಿ, ಬೆರಳಚ್ಚು ಮರುಪರಿಶೀಲನೆಗೆ ಬಿಹಾರ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಡಿ.28ರಂದು ಪತ್ರ ಬರೆದಿರುವ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯು, ಹೊಸದಾಗಿ ನೇಮಕಗೊಂಡ ಶಿಕ್ಷಕರ ದಾಖಲಾತಿ ಮರುಪರಿಶೀಲನೆಯು ಜನವರಿ 15ರಿಂದ ನಡೆಸಬೇಕು. ಅವರ ಬೆರಳಚ್ಚು ಸಂಗ್ರಹಿಸಿ, ಅದನ್ನು ಪ್ರವೇಶ ಪರೀಕ್ಷೆ ವೇಳೆ ಆಯೋಗ ಸಂಗ್ರಹಿಸಿದ ಬೆರಳಚ್ಚುನೊಂದಿಗೆ ಸರಿಹೊಂದಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಈ ವೇಳೆ ಯಾವುದೇ ಅಸಮಂಜಸತೆ ಕಂಡುಬಂದರೆ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಲ್ಲದೆ, ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಬೆರಳಚ್ಚನ್ನು ಕೌನ್ಸಿಲಿಂಗ್ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಜೊತೆ ಹಂಚಿಕೊಳ್ಳದೆ ಇರುವ ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್ಸಿ) ಕ್ರಮವು ಸಮಂಜಸವಲ್ಲ ಎಂದು ಟೀಕಿಸಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಪರೀಕ್ಷಾ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಇತ್ತೀಚೆಗೆ ಹೊಸದಾಗಿ ನೇಮಕಗೊಂಡಿರುವ 4 ಸಾವಿರ ಶಿಕ್ಷಕರು ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರೆ ಎಂಬುದರ ಖಾತ್ರಿಗಾಗಿ ಮರುಪರಿಶೀಲನೆ ನಡೆಸಿತ್ತು. ಈ ವೇಳೆ ಅಕ್ರಮವಾಗಿ ಸೇವೆಗೆ ಸೇರಿದ್ದ ಮೂವರನ್ನು ಗುರುತಿಸಲಾಗಿತ್ತು. ಜೊತೆಗೆ, ಇನ್ನೂ ಮೂವರು ಶಿಕ್ಷಕರು ಪರಾರಿಯಾಗಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.