ಪಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ‘ಕಸ ಹೋಗಿ ಕಸದ ತೊಟ್ಟಿಗೆ ಸೇರಿದೆ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಹೇಳಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರೋಹಿಣಿ, ‘ಮಹಾಘಟಬಂಧನ್‌ನಲ್ಲಿ ಅವರಿಗೆ ಎಲ್ಲವೂ ಸರಿಯಿಲ್ಲ ಎನ್ನುವ ಕಾರಣಕ್ಕೆ ಅವರು 18 ತಿಂಗಳ ಹಿಂದೆ ವಿರೋಧ ಪಕ್ಷಗಳ ಮೈತ್ರಿಕೂಟ I.N.D.I.A ಸೇರಿದ್ದರು. ಕಸವು ಮರಳಿ ಕಸದ ತೊಟ್ಟಿಗೆ ಹೋಗಿದೆ’ ಎಂದಿದ್ದಾರೆ.

ಕಳೆದ ಗುರುವಾರ ರೋಹಿಣಿ ಅವರು ‘ಸೈದ್ಧಾಂತಿಕವಾಗಿ ಅಲೆದಾಡುವವರು, ಸಮಾಜವಾದದ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ’ ಎಂದು ವಿವಾದಿತ ಹೇಳಿಕೆಯ ಪೋಸ್ಟ್ ಹಾಕಿ ನಂತರ ಡಿಲೀಟ್ ಮಾಡಿದ್ದರು. ಈ ಬಗ್ಗೆ ಸಮರ್ಥನೆ ನೀಡಿದ್ದ ಆರ್‌ಜೆಡಿ, ಆಚಾರ್ಯ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡಿವೆಯೇ ಹೊರತು ಬಿಹಾರ ಸಿ.ಎಂ ನಿತೀಶ್ ಕುಮಾರ್ ಬಗ್ಗೆ ಅಲ್ಲ’ ಎಂದು ಹೇಳಿಕೊಂಡಿತ್ತು. ಇದೀಗ ನೇರವಾಗಿ ನಿತೀಶ್ ಕುಮಾರ್ ಬಗ್ಗೆಯೇ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.