ಭುವನೇಶ್ವರ: ‘ಅದಾನಿ ಸಮೂಹದಿಂದ ರಾಜ್ಯ ಸರ್ಕಾರದ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂಬ ಅರೋಪಗಳು ಸುಳ್ಳು’ ಎಂದು ಬಿಜೆಡಿ ಶುಕ್ರವಾರ ಹೇಳಿದೆ.

‘ಕೇಂದ್ರ ಸರ್ಕಾರ ಒಡೆತನದ ಸಂಸ್ಥೆಯಿಂದ ರಾಜ್ಯಕ್ಕೆ ಸೌರ ವಿದ್ಯುತ್ ಪೂರೈಕೆ ಗುತ್ತಿಗೆ ನೀಡುವುದಕ್ಕಾಗಿ ಅದಾನಿ ಸಮೂಹದಿಂದ ರಾಜ್ಯದ ಅಧಿಕಾರಿಗಳು ಲಂಚ ಪಡೆದಿದ್ದರು ಎಂಬುದು ಸುಳ್ಳು’ ಎಂದು ಒಡಿಶಾದ ಮಾಜಿ ಇಂಧನ ಸಚಿವ ಹಾಗೂ ಹಾಲಿ ಶಾಸಕ ಪಿ.ಕೆ.ದೇವ್ ಹೇಳಿದ್ದಾರೆ.

‘ಒಡಿಶಾದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಮಾಡಲಾಗಿದೆ. ವಿದ್ಯುತ್ ವಿತರಣೆ ಕುರಿತು ಗ್ರಿಡ್ಕೊ, ಸೋಲಾರ್ ಎನರ್ಜಿ ಕಾರ್ಪೋರೇಷನ್ ಆಫ್ ಇಂಡಿಯಾ (ಎಸ್ಇಸಿಐ) ನಡುವೆ ಒಪ್ಪಂದವಾಗಿದೆ’ ಎಂದು ದೇವ್ ಹೇಳಿದ್ದಾರೆ.

‘ರಾಜ್ಯದ ಕೆಲ ಭಾಗಗಳಿಗೆ ಟಾಟಾ ಪವರ್ ಕಂಪನಿಯೇ ವಿದ್ಯುತ್ ಪೂರೈಕೆ ಮಾಡುತ್ತಿದೆ. ಅದಾನಿ ಸಮೂಹ, ಎಸ್ಇಸಿಐ, ಗ್ರಿಡ್ಕೊ ಹಾಗೂ ಇತರ ವಿತರಣಾ ಸಂಸ್ಥೆಗಳು ವಿದ್ಯುತ್ ಪೂರೈಕೆ ಒಪ್ಪಂದದ ಭಾಗವಾಗಿರಬಹುದು. ಆದರೆ, ವಿದ್ಯುತ್ ವಿತರಣಾ ಕಾರ್ಯದಲ್ಲಿ ರಾಜ್ಯ ಸರ್ಕಾರದ ನೇರ ಪಾತ್ರ ಇಲ್ಲ’ ಎಂದು ತಿಳಿಸಿದ್ದಾರೆ.

2000ದಿಂದ ಈ ವರ್ಷದ ಜೂನ್ ವರೆಗೆ ಒಡಿಶಾದಲ್ಲಿ ಬಿಜೆಡಿ ನೇತೃತ್ವದ ಸರ್ಕಾರ ಇತ್ತು.

ದುಬಾರಿ ದರದ ಸೌರ ವಿದ್ಯುತ್ ಪೂರೈಕೆ ಗುತ್ತಿಗೆ ನೀಡುವುದಕ್ಕಾಗಿ ಅದಾನಿ ಗ್ರೀನ್ ಎನರ್ಜಿ ಕಂಪನಿಯು ಒಡಿಶಾ ಸೇರಿದಂತೆ ಹಲವು ರಾಜ್ಯಗಳ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಅದಾನಿ ಸಮೂಹ ಮುಂದಾಗಿತ್ತು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಆರೋಪಿಸಿದೆ. ಈ ಸಂಬಂಧ, ಉದ್ಯಮಿ ಗೌತಮ್ ಅದಾನಿ, ಅವರ ಅಣ್ಣನ ಮಗ ಸಾಗರ್ ಅದಾನಿ ವಿರುದ್ಧ ಅಮೆರಿಕದ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.