ವಿಲ್ಲುಪುರಂ (ತಮಿಳುನಾಡು): ಸೋಮವಾರವಷ್ಟೇ ಬಿಜೆಪಿ ಜತೆ ಮೈತ್ರಿಮಾಡಿಕೊಂಡ ತಮಿಳುನಾಡಿನ ಉತ್ತರ ಭಾಗದ ಪ್ರಭಾವಿ ಪ್ರಾದೇಶಿಕ ಪಕ್ಷ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಜತೆಗೆ ಬಿಜೆಪಿಯು ಲೋಕಸಭೆ ಚುನಾವಣೆಗೆ ಮಂಗಳವಾರ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಮಿತ್ರಪಕ್ಷ ಪಿಎಂಕೆಗೆ 10 ಸ್ಥಾನಗಳನ್ನು ಬಿಜೆಪಿ ಹಂಚಿಕೆ ಮಾಡಿದೆ.

ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಮತ್ತು ಪಿಎಂಕೆ ಸಂಸ್ಥಾಪಕ ಎಸ್.ರಾಮದಾಸ್ ಅವರು ಇಲ್ಲಿನ ತೈಲಾಪುರಂ ನಿವಾಸದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಕೇಂದ್ರ ಸಚಿವ ಎಲ್.ಮುರುಗನ್ ಕೂಡ ಇದ್ದರು.

ಎನ್ಡಿಎ ಮಿತ್ರ ಪಕ್ಷ ಪಿಎಂಕೆ ತಮಿಳುನಾಡಿನ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಅಣ್ಣಾಮಲೈ ಮತ್ತು ಪಿಎಂಕೆ ಅಧ್ಯಕ್ಷರಾದ ರಾಜ್ಯಸಭಾ ಸದಸ್ಯ ಡಾ. ಅನ್ಬುಮಣಿ ರಾಮದಾಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಿಎಂಕೆ ಕಳೆದ 10 ವರ್ಷಗಳಿಂದ ಎನ್ಡಿಎಯಲ್ಲಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಬಣದ ಒಂದು ಘಟಕವಾಗಿ ಹೋರಾಡಿತ್ತು’ ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು.
.ಲೋಕಸಭೆ ಚುನಾವಣೆ | 21 ಸ್ಥಾನಗಳಲ್ಲಿ ಡಿಎಂಕೆ ಸ್ಪರ್ಧೆ.LS polls | ಬಿಜೆಪಿ ವಿರುದ್ಧ ಎಚ್ಡಿಕೆ ಅಸಮಾಧಾನ: ಮೈತ್ರಿಯಲ್ಲಿ ಬಿರುಕಿನ ಲಕ್ಷಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.