ಹೈದರಾಬಾದ್: ಹಗಲಿರುಳು ದ್ವೇಷ ಉಗುಳುತ್ತಿರುವ ಬಿಜೆಪಿಯವರು ಮೊದಲು ಭಾರತೀಯರ ಕ್ಷಮೆ ಕೇಳಬೇಕೆಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ಒತ್ತಾಯಿಸಿದ್ದಾರೆ.

ಪ್ರವಾದಿ ಮಹಮ್ಮದ್ ಕುರಿತ ಅವಹೇಳನಕಾರಿ ಹೇಳಿಕೆ ಪ್ರಕರಣದ ಹಿನ್ನೆಲೆಯಲ್ಲಿ ಭಾರತವು ಕ್ಷಮೆಯಾಚಿಸಬೇಕೆಂದು ಅರಬ್ ರಾಷ್ಟ್ರಗಳು ಒತ್ತಾಯಿಸಿವೆ. ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕೆಟಿಆರ್, ‘ಕ್ಷಮೆಯಾಚಿಸಬೇಕಿರುವುದು ಬಿಜೆಪಿಯೇ ಹೊರತು ಭಾರತವಲ್ಲ’ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟಿಸಿರುವ ಕೆಟಿಆರ್, ‘ಬಿಜೆಪಿಯ ಮತಾಂಧರು ಮಾಡಿರುವ ದ್ವೇಷ ಭಾಷಣಗಳಿಗೆ ಭಾರತವೇಕೆ ಕ್ಷಮೆಯಾಚಿಸಬೇಕು? ಹಗಲಿರುಳು ದ್ವೇಷ ಹರಡುತ್ತಿರುವುದಕ್ಕಾಗಿ ನಿಮ್ಮ ಪಕ್ಷವು ಮೊದಲು ಭಾರತೀಯರಲ್ಲಿ ಕ್ಷಮೆ ಕೇಳಲಿ’ ಎಂದು ಒತ್ತಾಯಿಸಿದ್ದಾರೆ.

‘ಮೋದಿಜೀ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಅವರು ಮಹಾತ್ಮ ಗಾಂಧಿಯವರ ಹತ್ಯೆಯನ್ನು ಶ್ಲಾಘಿಸಿದಾಗ ನಿಮ್ಮ ಮೌನವು ಆಘಾತಕಾರಿಯಾಗಿತ್ತು. ಈ ಮೌನ ಸಮ್ಮತಿಯು ಧರ್ಮಾಂಧತೆ ಮತ್ತು ದ್ವೇಷವನ್ನು ಉತ್ತೇಜಿಸಿದೆ. ಇದು ಭಾರತಕ್ಕೆ ಸರಿಪಡಿಸಲಾಗದ ನಷ್ಟವನ್ನುಂಟು ಮಾಡಲಿದೆ’ ಎಂದು ಟಿಆರ್‌ಎಸ್ ನಾಯಕ ಬರೆದಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮಹಮ್ಮದ್ ಅವರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿರುವುದು ವಿವಾದ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು ಕ್ಷಮೆಯಾಚಿಸಬೇಕೆಂದು ಅರಬ್ ದೇಶಗಳು ಒತ್ತಾಯಿಸಿವೆ.

ಇವನ್ನೂ ಓದಿ...

ನೂಪುರ್ ಶರ್ಮಾ ಬಿಜೆಪಿಯಿಂದ ಅಮಾನತು, ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ಭಾರತಾಂಬೆ ತಲೆ ತಗ್ಗಿಸುವಂತಾಗಿದೆ: ವಿದೇಶಾಂಗ ನೀತಿ ಟೀಕಿಸಿದ ಸುಬ್ರಮಣಿಯನ್ ಸ್ವಾಮಿ

ಸ್ವದೇಶದಲ್ಲಿ ಆಡುವ ಮತಾಂಧ ಮಾತಿನ ವಿದೇಶಿ ಪರಿಣಾಮದ ಬಗ್ಗೆ ಅರಿವಿರಬೇಕು: ತರೂರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.