ಜಾಢ್ಗ್ರಾಮ (ಪಶ್ಚಿಮ ಬಂಗಾಳ) : ‘ಮಾಜಿ ಪ್ರಿಯತಮೆಯೊಂದಿಗಿನ ಆಪ್ತ ಕ್ಷಣಗಳ ಚಿತ್ರ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪದಡಿ 24 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ. ಈತ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರ ಸಹೋದರ ಸಂಬಂಧಿ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

‘ಆರೋಪಿಯು ಪ್ರಿಯತಮೆಯೊಂದಿಗಿನ ಖಾಸಗಿ ಕ್ಷಣಗಳ ಚಿತ್ರ ಹಾಗೂ ವಿಡಿಯೊವನ್ನು ಆಕೆಯ ಭಾವಿ ಅತ್ತೆ–ಮಾವನಿಗೂ ರವಾನಿಸಿದ್ದ. ಇದರಿಂದಾಗಿ ಅದಾಗಲೇ ನಿಶ್ಚಯವಾಗಿದ್ದ ಆಕೆಯ ವಿವಾಹವೂ ಮುರಿದುಬಿದ್ದಿತ್ತು’ ಎಂದು ತಿಳಿಸಿದ್ದಾರೆ.

‘ಯುವತಿಯು ನೀಡಿದ ಲಿಖಿತ ದೂರಿನ ಆಧಾರದಲ್ಲಿ ಜಾಢ್ಗ್ರಾಮದ ಸೈಬರ್ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತಪ್ಪಿತಸ್ಥ ಎಂಬುದು ಸಾಬೀತಾಗಿದ್ದರಿಂದ ಆತನನ್ನು ಬಂಧಿಸಲಾಯಿತು. ಸ್ಥಳೀಯ ನ್ಯಾಯಾಲಯವು ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.