ಚಂಡೀಗಢ: ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆಗೆ 21 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದೆ.

ಮಾಜಿ ಸಚಿವರಾದ ಕ್ರಿಶನ್ ಕುಮಾರ್ ಬೇಡಿ ಮತ್ತು ಮನೀಶ್ ಗ್ರೋವರ್ ಅವರನ್ನು ಕ್ರಮವಾಗಿ ನರ್ವಾನಾ ಮತ್ತು ರೋಹ್ಟಕ್ ಕ್ಷೇತ್ರಗಳಿಂದ ಕಣಕ್ಕಿಳಿಸಿದೆ.

ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ಆಪ್ತ ಪವನ್ ಸೈನಿ ಅವರನ್ನು ನರೇಂಗರ್ ಕ್ಷೇತ್ರದಿಂದ ಮತ್ತು ಸತ್ಪಾಲ್ ಜಂಬಾ ಅವರನ್ನು ಪುಂಡ್ರಿಯಿಂದ ಕಣಕ್ಕಿಳಿಸಿದೆ
.Haryana polls | ಮೈತ್ರಿ ಮಾತುಕತೆ ವಿಫಲ?: ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ AAP.
ಅಸ್ಸಂದ್ನಿಂದ ಯೋಗೇಂದರ್ ರಾಣಾ , ಗನೌರ್ನಿಂದ ದೇವೇಂದ್ರ ಕೌಶಿಕ್ , ರೈಯಿಂದ ಕೃಷ್ಣ ಗಹ್ಲಾವತ್ , ಬರೋಡಾದಿಂದ ಪ್ರದೀಪ್ ಸಾಂಗ್ವಾನ್ ಮತ್ತು ಜೂಲಾನಾದಿಂದ ಕ್ಯಾಪ್ಟನ್ ಯೋಗೇಶ್ ಬೈರಾಗಿ ಕಣಕ್ಕಿಳಿದಿದ್ದಾರೆ.

ದಬ್ವಾಲಿ ಕ್ಷೇತ್ರದಿಂದ ಬಲದೇವ್ ಸಿಂಗ್ ಮಂಗಿಯಾನಾ, ಮನೀಶ್ ಗ್ರೋವರ್ ಅವರನ್ನು ರೋಹ್ಟಕ್ಗೆ , ಓಂ ಪ್ರಕಾಶ್ ಯಾದವ್ ಅವರನ್ನು ನರ್ನಾಲ್ಗೆ , ಕೃಷ್ಣ ಕುಮಾರ್ ಅವರನ್ನು ಬವಾಲ್ (ಎಸ್ಸಿ), ಬಿಮ್ಲಾ ಚೌಧರಿ ಅವರನ್ನು ಪಟೌಡಿ (ಎಸ್ಸಿ), ಸಂಜಯ್ ಸಿಂಗ್ ಅವರು ನುಹ್ ಮತ್ತು ನಸೀಮ್ ಅಹ್ಮದ್ ಅವರು ಫಿರೋಜ್ಪುರ ಜಿರ್ಕಾ ಕ್ಷೇತ್ರಕ್ಕೆ ನಾಮನಿರ್ದೇಶನಗೊಂಡಿದ್ದಾರೆ.

ಪುನ್ಹಾನಾದಿಂದ ಐಜಾಜ್ ಖಾನ್, ಹಾಥಿನ್ನಿಂದ ಮನೋಜ್ ರಾವತ್, ಹೊಡಲ್ (ಎಸ್ಸಿ) ನಿಂದ ಹರಿಂದರ್ ಸಿಂಗ್ ರಾಮರತ್ತನ್ ಮತ್ತು ಬದ್ಖಾಲ್ನಿಂದ ಧನೇಶ್ ಅದ್ಲಾಖಾ ಸ್ಪರ್ಧಿಸಲಿದ್ದಾರೆ.
.Haryana Polls | 9 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೊಳಿಸಿದ ಎಎಪಿ.
ಸೆಪ್ಟೆಂಬರ್ 4 ರಂದು ಬಿಜೆಪಿ 67 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರನ್ನು ಲಾಡ್ವಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಅಲ್ಲದೇ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಹಲವರಿಗೆ ಟಿಕೆಟ್ ನೀಡಿದೆ.

90 ಸದಸ್ಯ ಬಲದ ಹರಿಯಾಣ ವಿಧಾನ ಸಭೆಗೆ ಅಕ್ಟೋಬರ್ 5ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 8ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
.Haryana Assembly Election 2024: ಬಿಜೆಪಿ ಮೊದಲ ಪಟ್ಟಿ ಪ್ರಕಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.