ರಾಂಚಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದೇ ಇದ್ದರೆ, ಬುಡಕಟ್ಟು ಜನಾಂಗವನ್ನು ಲೂಟಿ ಮಾಡಿ ಅವರನ್ನು ಕಾಡಿನಿಂದ ಹಾಗೂ ಕಲ್ಲಿದ್ದಲು ಪ್ರದೇಶಗಳಿಂದ ನಿರ್ಮೂಲನೆ ಮಾಡಲಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಚಾಂಪೈ ಸೊರೇನ್ ಹೇಳಿದರು.

ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನ ಅವರು ಭಾಷಣ ಮಾಡಿದರು.
.ಜಾರ್ಖಂಡ್: ಚಂಪೈ ಸಂಪುಟಕ್ಕೆ ಶಿಬು ಕಿರಿಯ ಪುತ್ರ ಬಸಂತ್ ಸೊರೇನ್ ಸೇರ್ಪಡೆ.
ಬುಡಕಟ್ಟು ಜನಾಂಗದವರ ಹಕ್ಕುಗಳನ್ನು ರಕ್ಷಿಸುವ ಹಲವು ಕಾನೂನುಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿರುವ ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರ ಅಂತಹ ಪ್ರಯತ್ನಗಳ ವಿರುದ್ಧ ಪ್ರತಿಭಟಿಸುತ್ತಲೇ ಬಂದಿದೆ ಎಂದರು.

‘ಬಿಜೆಪಿ ಸರ್ಕಾರವು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಗ್ರಾಮಸಭೆಗಳ ಹಕ್ಕನ್ನು ಕಸಿಯಲಾಯಿತು. ಕಲ್ಲಿದ್ದಲು ಪ್ರದೇಶಗಳ ಸ್ವಾಧೀನ ಮತ್ತು ಅಭಿವೃದ್ಧಿ ಕಾಯಿದೆ ಹಾಗೂ ಚೋಟಾನಾಗಪುರ ಬಾಡಿಗೆ ಕಾಯ್ದೆಯಲ್ಲೂ ತಿದ್ದುಪಡಿ ತರುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.
.'ಜಾರ್ಖಂಡ್ ಟೈಗರ್' ಎನಿಸಿದ್ದ ಚಂಪೈ ಸೊರೇನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಅಲ್ಲದೆ ಬಿಜೆಪಿಯ ಉದ್ದೇಶಗಳನ್ನು ಜನರಿಗೆ ತಲುಪಿಸಬೇಕು ಎಂದು ಮೈತ್ರಿ ಪಕ್ಷಗಳ ಶಾಸಕರಿಗೆ ಅವರು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಬಿಜೆಪಿಯ ಈ ತಂತ್ರವನ್ನು ಅರಿತಿದ್ದರು. ಹೀಗಾಗಿ ಅವರ ಯಾವುದೇ ಪಾತ್ರವಿಲ್ಲದಿದ್ದರೂ ಭೂ ಹಗರಣದಲ್ಲಿ ಅವರನ್ನು ಜೈಲಿಗಟ್ಟಲಾಯಿತು ಎಂದು ಚಾಂಪೈ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.