ಚಂಡೀಗಢ : ಹೋಟೆಲ್ವೊಂದರಲ್ಲಿ ಹತ್ಯೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರ ಮೃತದೇಹವು ಫತೇಹಾಬಾದ್ ಜಿಲ್ಲೆಯಲ್ಲಿರುವ ಕಾಲುವೆಯೊಂದರಲ್ಲಿ ಶನಿವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುರುವಾರ ವಿಮಾನ ನಿಲ್ದಾಣದಲ್ಲಿ ಬಂಧಿತನಾಗಿದ್ದ ಆರೋಪಿ ಬಾಲ್ರಾಜ್ ಗಿಲ್ ನೀಡಿದ ಮಾಹಿತಿ ಆಧರಿಸಿ ಮೃತದೇಹವನ್ನು ಪತ್ತೆಹಚ್ಚಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

’ಅಶ್ಲೀಲ ಚಿತ್ರಗಳ ಮೂಲಕ ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್ನನ್ನು ಬೆದರಿಸಿ ಹಣ ಪಡೆದುಕೊಳ್ಳುತ್ತಿದ್ದ ಪಹುಜಾಳನ್ನು ಹೋಟೆಲ್ಗೆ ಕರೆ ತಂದಿದ್ದ 5 ಮಂದಿ ಕೊಣೆಯೊಳಗೆ ಗುಂಡಿಕ್ಕಿ ಕೊಂದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಸಿಂಗ್ ಸೇರಿದಂತೆ ಇತರ ಆರೋಪಿಗಳು ಪಹುಜಾ ಅವರ ಮೃತದೇಹವನ್ನು ಬಿಳಿ ಬಣ್ಣದ ಶೀಟ್ನಲ್ಲಿ ಸುತ್ತಿ, ಕಾರಿನಲ್ಲಿ ತೆಗೆದುಕೊಂಡುಹೋಗುತ್ತಿರುವುದು ಹೋಟೆಲ್ನ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳಲ್ಲಿ ಕಂಡು ಬಂದಿದೆ.

ಕಿಲೋಮೀಟರ್ನಷ್ಟು ದೂರ ಸಾಗಿದ ಬಳಿಕ ಸಿಂಗ್ ಕಾರನ್ನು ಬಾಲ್ರಾಜ್ ಗಿಲ್ಗೆ ನೀಡಿದ್ದಾನೆ. ಪಂಜಾಬ್ನ ಪಟಿಯಾಲದ ಬಸ್ ನಿಲ್ದಾಣವೊಂದರ ಬಳಿ ಕಾರ್ ಪತ್ತೆಯಾಗಿದೆ.

‘ಮತ್ತೊಬ್ಬ ಆರೋಪಿ ರವಿ ಬಂಗಾ ಜೊತೆ ಸೇರಿ ಗಿಲ್, ಶವವನ್ನು ಕಾಲುವೆಗೆ ಹಾಕಿದ್ದು, ಬಂಗಾನನ್ನು ಬಂಧಿಸಲಾಗಿದೆ’ ಎಂದು ಅಪರಾಧ ವಿಭಾಗದ ಎಸಿಪಿ ವರುಣ್ ಕುಮಾರ್ ದಹಿಯಾ ತಿಳಿಸಿದ್ದಾರೆ.
.ಮುಂಬೈ: ನೇಣಿಗೆ ಶರಣಾದ ರೂಪದರ್ಶಿ, ಡೆತ್ನೋಟ್ನಲ್ಲೇನಿದೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.