ಹೈದರಾಬಾದ್: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಪ್ರೀತ್ ಸಿಂಗ್ ಸೇರಿದಂತೆ ನಾಲ್ವರು ಮಾದಕ ವಸ್ತು ವ್ಯಸನಿಗಳು ಹಾಗೂ ಐವರು ಡ್ರಗ್ ಪೆಡ್ಲರ್ಗಳನ್ನು ಸೋಮವಾರ ಬಂಧಿಸಲಾಗಿದೆ.

ತೆಲಂಗಾಣ ಮಾದಕವಸ್ತು ವಿರೋಧಿ ದಳ ಮತ್ತು ಸೈಬರ್ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿಗಳ ಬಳಿ ಇದ್ದ 35 ಲಕ್ಷ ಮೌಲ್ಯದ 200 ಗ್ರಾಂ ಕೊಕೇನ್, ಎರಡು ಪಾಸ್ಪೋರ್ಟ್, ಎರಡು ಬೈಕ್, 10 ಮೊಬೈಲ್ಗಳು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

‘ಬಂಧಿತ ಪೆಡ್ಲರ್ಗಳ ಗ್ರಾಹಕರ ಪಟ್ಟಿಯಲ್ಲಿದ್ದವರ ಪೈಕಿ ಅಮನ್ ಸೇರಿದಂತೆ ಆರು ಮಂದಿಯ ಮೂತ್ರದ ಮಾದರಿಯನ್ನು ಪರಿಶೀಲಿಸಿದ ನಂತರ ಅವರನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಶಂಶಾಬಾದ್ ಉಪ ಪೊಲೀಸ್ ಆಯುಕ್ತ ಶ್ರೀನಿವಾಸ್ ತಿಳಿಸಿದರು.

ಬಂಧಿತ ಪೆಡ್ಲರ್ಗಳು ನೈಜೀರಿಯಾದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು.

ಡ್ರಗ್ಸ್ ಪೂರೈಕೆ ಮತ್ತು ಸೇವನೆ ಪ್ರಕರಣದಲ್ಲಿ ರಕುಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿ, 2021 ಮತ್ತು 2022ರಲ್ಲಿ ಹೇಳಿಕೆ ದಾಖಲಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.