ನವದೆಹಲಿ: ಭಾರತೀಯ ರೈಲ್ವೆಗೆ ₹25,000 ಕೋಟಿ ಮೊತ್ತದ 5 MHz ಸ್ಪೆಕ್ಟ್ರಂ ಹಂಚಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡಲಿ ಎಂದು ಅವರು ಹೇಳಿದ್ದಾರೆ.

ರೈಲ್ವೆಗೆ ಸ್ಪೆಕ್ಟ್ರಂ ಹಂಚಿಕೆ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಓದಿ:ಲಸಿಕೆ ಹಾಕಿಸಿಕೊಂಡರೆ 20 ಕೆ.ಜಿ ಅಕ್ಕಿ ಉಚಿತ: ವರ್ಕ್ ಆಯ್ತು ಅಧಿಕಾರಿ ಕಾರ್ಯತಂತ್ರ

ರೈಲ್ವೆಯು ಸದ್ಯ ಸಂವಹನಕ್ಕಾಗಿ ಆಪ್ಟಿಕಲ್ ಕೇಬಲ್ ನೆಟ್ವರ್ಕ್ ಅವಲಂಬಿಸಿದೆ. ಹೊಸ ಸ್ಪೆಕ್ಟ್ರಂ ಹಂಚಿಕೆಯಿಂದ ರಿಯಲ್ ಟೈಮ್ ಆಧಾರದಲ್ಲಿ ಹೈಸ್ಪೀಡ್ ರೇಡಿಯೊ ಬಳಸಲು ರೈಲ್ವೆಗೆ ಅನುಕೂಲವಾಗಲಿದೆ.

ರೈಲ್ವೆಯ ಸಂವಹನ ಮತ್ತು ಸಿಗ್ನಲಿಂಗ್ ಜಾಲಗಳನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದೂ ಸಚಿವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.