ನವದೆಹಲಿ: ನಿರ್ಭಯಾ ನಿಧಿಯಡಿ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ₹3,024 ಕೋಟಿ ಬಿಡುಗಡೆ ಮಾಡಿದ್ದು, ಈ ಪೈಕಿ ರಾಜ್ಯಗಳು ₹1,919 ಕೋಟಿ ಅನುದಾನವನ್ನು ಬಳಕೆ ಮಾಡಿಕೊಂಡಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಶುಕ್ರವಾರ ತಿಳಿಸಿದೆ.

ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ, ಮಹಿಳೆಯರ ಸುರಕ್ಷತೆಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಈ ನಿಧಿ ಸ್ಥಾಪಿಸಿತ್ತು. ನಿರ್ಭಯಾ ನಿಧಿ ಅನುದಾನ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವೆ ಸ್ಮೃತಿ ಇರಾನಿ, ರಾಜ್ಯವಾರು ಮಾಹಿತಿಯನ್ನು ನೀಡಿದರು.

14,950 ಎಸ್‌ಎಇಸಿ ಕಿಟ್: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸೂಕ್ತ ತನಿಖೆಗಾಗಿ 14,950 ಸಾಕ್ಷ್ಯ ಸಂಗ್ರಹ ಕಿಟ್‌ಗಳನ್ನು(ಎಸ್‌ಎಇಸಿ) ನಿರ್ಭಯಾ ನಿಧಿಯಡಿ (₹2.97 ಕೋಟಿ) ನೀಡಲಾಗಿದೆ ಎಂದು ಇರಾನಿ ತಿಳಿಸಿದರು. ಉತ್ತರ ಪ್ರದೇಶಕ್ಕೆ 3,056, ರಾಜಸ್ಥಾನಕ್ಕೆ 1,452 ಹಾಗೂ ಮಧ್ಯಪ್ರದೇಶಕ್ಕೆ 1,187 ಕಿಟ್‌ಗಳನ್ನು ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.