ನವದೆಹಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದ ಆವರಣದಲ್ಲಿ ನಿಗಾದಲ್ಲಿ ಇರಿಸಲಾಗಿದ್ದ ಚೀತಾಗಳನ್ನು ಶೀಘ್ರದಲ್ಲಿಯೇ ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. ಈ ಚೀತಾಗಳನ್ನು ಆಫ್ರಿಕಾದಿಂದ ತರಲಾಗಿತ್ತು.

ಮುಂಗಾರು ಅವಧಿ ಬಳಿಕ ಈ ಚೀತಾಗಳು ಮತ್ತು ಅವುಗಳ ಮರಿಗಳನ್ನು ಅರಣ್ಯಕ್ಕೆ ಬಿಡಲು ಕೇಂದ್ರ ಸರ್ಕಾರದ ಚೀತಾ ಯೋಜನೆ ಸಮಿತಿಯು ಶುಕ್ರವಾರ ನಿರ್ಧರಿಸಿದೆ.

ಸಮಿತಿಯ ಸದಸ್ಯರು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ, ಚೀತಾಗಳನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿದರು.

ಕುನೊ ಉದ್ಯಾನದಲ್ಲಿ 12 ಮರಿಗಳು ಸೇರಿ 25 ಚೀತಾಗಳಿವೆ. 2022ರ ಸೆಪ್ಟೆಂಬರ್ನಲ್ಲಿ ಮೊದಲ ತಂಡದಲ್ಲಿ ನಮೀಬಿಯಾದಿಂದ 8, ಎರಡನೇ ತಂಡದಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಈ ಪೈಕಿ ಏಳು ಚೀತಾಗಳು ಮೃತಪಟ್ಟಿವೆ. ಭಾರತಕ್ಕೆ ಚೀತಾಗಳನ್ನು ತಂದ ನಂತರ ಅವು 17 ಮರಿಗಳಿಗೆ ಜನ್ಮ ನೀಡಿದ್ದು, ಈ ಪೈಕಿ 12 ಬದುಕುಳಿದಿವೆ.

ಈ ಮೊದಲು ಚೀತಾಗಳನ್ನು ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಮೂರು ಚೀತಾಗಳು ಮೃತಪಟ್ಟ ಕಾರಣ ಮತ್ತೆ ಅವುಗಳನ್ನು ವಾಪಸ್ ತರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.