ಕಾಂಚೀಪುರಂ: ಕಾಂಚೀಪುರಂನಲ್ಲಿ 5,000 ಕೋಟಿ ವೆಚ್ಚದ ರೈಲು ಮತ್ತು ರಸ್ತೆ ನಿರ್ಮಾಣ ಯೋಜನೆಗೆಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದ್ದಾರೆ.

ಚೆನ್ನೈನ ಎಂಜಿಆರ್ ಜಾನಕಿ ಕಾಲೇಜಿನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ ರಾಮಚಂದ್ರನ್ ಅವರ ಪುತ್ಥಳಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದ ಮೋದಿ, ಕಿಲಂಬಕ್ಕಂನಲ್ಲಿ ನಡೆಯುತ್ತಿರುವ ಎನ್ಡಿಎ ರ್ಯಾಲಿಯಲ್ಲಿ ಎಂಜಿಆರ್ ಮತ್ತು ಜಯಲಲಿತಾ ಅವರ ಫೋಟೊಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಕಾಶಿಯ ಸಂಸದನಾದ ತಾನು ಕಾಂಚೀಪುರಂಗೆ ಬಂದಿದ್ದೇನೆ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಮೋದಿ ತಮಿಳು ಭಾಷೆಯನ್ನು ಹೊಗಳಿದ್ದಾರೆ.ತಮಿಳುನಾಡಿನ ಅಮ್ಮ ಜಯಲಲಿತಾ ಕನಸುಕಂಡ ರಾಜ್ಯವನ್ನು ನನಸಾಗಿಸಲು ಎನ್ಡಿಎ ಬದ್ಧವಾಗಿದೆ ಎಂದಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು
* ಮಣ್ಣಿನ ಮಗ ಎಂಜಿಆರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲು ನನಗೆ ಖುಷಿಯಾಗುತ್ತಿದೆ ಎಂದ ಮೋದಿ, ಭಾರತದ ಗೌರವಾನ್ವಿತ ವ್ಯಕ್ತಿ ಅವರು ಎಂದಿದ್ದಾರೆ. ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣವನ್ನುಎಂಜಿಆರ್ ಎಂದು ಮರುನಾಮಕರಣ ಮಾಡಿದ್ದು ಖುಷಿಯ ವಿಚಾರ.

* ತಮಿಳುನಾಡಿಗೆ ಬರುವ ಮತ್ತು ಹೋಗುವ ವಿಮಾನಗಳಲ್ಲಿ ತಮಿಳು ಭಾಷೆಯಲ್ಲಿಯೇ ಅನೌಂನ್ಸ್ ಮೆಂಟ್ ಮಾಡಲಾಗುತ್ತದೆ.
* ಶ್ರೀಲಂಕಾದ ಜಾಫ್ನಾ ಹೋದಾಗ ನಾನು ತಮಿಳು ಸಹೋದರ,. ಸಹೋದರಿಯರಲ್ಲಿ ಮಾತನಾಡಿದ್ದೆ,
* ನಾನು ಶ್ರೀಲಂಕಾಗೆ ಹೋಗಿದ್ದಾಗ ನಾನು ಎಂಜಿಆರ್ ಜನ್ಮ ಸ್ಥಳಕ್ಕೆ ಭೇಟಿ ನೀಡಿದ್ದೆ.ಅಲ್ಲಿ ನಾವು ತಮಿಳು ಜನರಿಗೆ 14,000 ಮನೆಗಳನ್ನು ನಿರ್ಮಿಸಲು ನಿರ್ಧರಿಸಿದ್ದೇವೆ.ಈಗಾಗಲೇ ನಾವು 1000 ಮನೆ ನಿರ್ಮಾಣ ಮಾಡಿದ್ದು, 3000 ಮನೆಗಳು ನಿರ್ಮಾಣ ಹಂತದಲ್ಲಿದೆ.ಶ್ರೀಲಂಕಾ ಸರ್ಕಾರ ಜಮೀನು ನೀಡಿದ ಕೂಡಲೇ ನಾವು ಉಳಿದ ಮನೆಗಳನ್ನು ನಿರ್ಮಿಸುತ್ತೇವೆ.ಜಾಫ್ನಾ ಭೇಟಿ ಮಾಡಿದ ಮೊದಲ ಪ್ರಧಾನಿ ನಾನೇ.

* ವಿಂಗ್ ಕಮಾಂಡರ್ ಅಭಿನಂದನ್ ಅವರ ಕಥೆ ಗೊತ್ತೇ ಇದೆ.ಹಾಗಾಗಿ ನಾನು ಅದನ್ನು ಪುನರಾವರ್ತಿಸುವುದಿಲ್ಲ.ಸರ್ಕಾರದ ಹಸ್ತಕ್ಷೇಪದಿಂದಾಗಿ ಶ್ರೀಲಂಕಾ ವಶ ಪಡಿಸಿಕೊಂಡಿದ್ದ ಹಲವಾರು ಮೀನುಗಾರರು ಬಂಧ ಮುಕ್ತರಾಗಿದ್ದಾರೆ.ಸೌದಿ ದೊರೆ ಕೂಡಾ ಅರಬ್ ರಾಷ್ಟ್ರದಲ್ಲಿ ಬಂಧಿಯಾಗಿದ್ದ ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ.

* ಪ್ರವಾಸೋದ್ಯಮಕ್ಕೆ ಕಾಂಚೀಪುರಂ ಉತ್ತಮವಾಗಿದೆ.
* ಸ್ವಾರ್ಥಿ ರಾಜಕಾರಣಿಗಳು ಬಲಿಷ್ಠ ಭಾರತ ಅಥವಾ ಬಲಿಷ್ಠ ಭದ್ರತಾ ಪಡೆಯನ್ನು ಬಯಸುವುದಿಲ್ಲ.
* ಪ್ರಾದೇಶಿಕ ರಾಜ್ಯಗಳ ಆಗ್ರಹಗಳನ್ನು ಈಡೇರಿಸುವವರೆಗೆ ದೇಶ ಅಭಿವೃದ್ಧಿ ಹೊಂದಲ್ಲ.

* ಜನರು ಎಂಜಿಆರ್ ಅವರ ನೇತೃತ್ವದ ಸರ್ಕಾರವನ್ನು ಆರಿಸಿದ್ದರು.ಇದನ್ನು ಕಾಂಗ್ರೆಸ್ ವಿಲೀನಗೊಳಿಸಿತ್ತು.ಕಾಂಗ್ರೆಸ್ ಆರ್ಟಿಕಲ್356ನ್ನು ಪದೇ ಪದೇ ದುರುಪಯೋಗಪಡಿಸಿದೆ.ಅವರಿಗೆ ರಾಜ್ಯ ಸರ್ಕಾರ ಇಷ್ಟವಾಗದೇ ಇದ್ದರೆ ಅದನ್ನು ಅವರು ಬರ್ಖಾಸ್ತುಗೊಳಿಸುತ್ತಾರೆ. ಇಂದಿರಾಗಾಂಧಿಯೊಬ್ಬರೇ 50 ಸರ್ಕಾರಗಳನ್ನು ಬರ್ಖಾಸ್ತು ಮಾಡಿದ್ದರು.

* ವಿಪಕ್ಷಗಳು ಮೋದಿ ಮೇಲೆ ದ್ವೇಷ ಕಾರುತ್ತಿವೆ.ಅವರು ನನ್ನ ಬಡತನವನ್ನು, ನನ್ನ ಜಾತಿ ಮತ್ತು ನನ್ನ ಕುಟುಂಬವನ್ನು ಲೇವಡಿ ಮಾಡುತ್ತವೆ. ಒಬ್ಬ ಕಾಂಗ್ರೆಸ್ ನಾಯಕ ನನ್ನನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಾನೆ.ನಾನು ಅವರ ಬೆದರಿಕೆ ಮತ್ತು ಕುಹಕಗಳಿಗೆ ತಲೆ ಕೆಡೆಸಿಕೊಳ್ಳುವುದಿಲ್ಲ .

* ನನಗೆ ತಡೆಯೊಡ್ಡುವುದಕ್ಕಾಗಿ ಅಪವಿತ್ರ ಮೈತ್ರಿ ಒಗ್ಗಟ್ಟಾಗಿ ನಿಂತಿದೆ.ಎನ್ಡಿಎ ಸರ್ತಾರ ಭ್ರಷ್ಟಾಚಾರದ ವಿಷಯದಲ್ಲಿ ರಾಜಿಮಾಡಿಕೊಳ್ಳುವುದಿಲ್ಲ.ದೇಶದ ರಕ್ಷಣೆ ವಿಷಯ ಬಂದಾಗಭಯೋತ್ಪಾದನೆಯನ್ನು ಕ್ಷಮಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.