ನವದೆಹಲಿ: ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಮೆಗಾಸ್ಟಾರ್ ಚಿರಂಜೀವಿ, ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ದಿ. ಎಂ.ಫಾತಿಮಾ ಬೀವಿ ಹಾಗೂ ಬಾಂಬೇ ಸಮಾಚಾರ್ ಪತ್ರಿಕೆಯ ಮಾಲೀಕ ಹರ್ಮುಸ್ಜಿ ಎನ್. ಕಾಮಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಗುರುವಾರ ಪ್ರದಾನ ಮಾಡಿದರು.

ಬಿಜೆಪಿ ಮುಖಂಡ ಒ.ರಾಜಗೋಪಾಲ್, ಲಡಾಕ್ನ ಧಾರ್ಮಿಕ ಮುಖಂಡ ತೊಗ್ದಾನ್ ರಿನ್ಪೋಚೆ, ತಮಿಳು ನಟ ದಿ. ‘ಕ್ಯಾಪ್ಟನ್’ ವಿಜಯಕಾಂತ್, ಗುಜರಾತಿ ಸುದ್ದಿಪತ್ರಿಕೆ ಜನ್ಮಭೂಮಿಯ ಸಿಇಒ ಕುಂದನ್ ವ್ಯಾಸ್ ಅವರಿಗೂ ಪದ್ಮ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ವೈಜಯಂತಿಮಾಲಾ (90) ಹಾಗೂ ಚಿರಂಜೀವಿ ಅವರಿಗೆ ಪದ್ಮ ವಿಭೂಷಣ, ನ್ಯಾ. ಬೀವಿ, ಕಾಮಾ, ರಾಜಗೋಪಾಲ್, ವಿಜಯಕಾಂತ್, ರಿನ್ಪೋಚೆ ಹಾಗೂ ವ್ಯಾಸ್ ಅವರಿಗೆ ಪದ್ಮ ಭೂಷಣ ಪ್ರದಾನ ಮಾಡಲಾಯಿತು.

ನ್ಯಾ. ಬೀವಿ, ವಿಜಯಕಾಂತ್ ಮತ್ತು ರಿನ್ಪೋಚೆ ಅವರ ಪರವಾಗಿ ಅವರ ಕುಟುಂಬದವರು ಪ್ರಶಸ್ತಿ ಸ್ವೀಕರಿಸಿದರು.

ಉಪ ರಾಷ್ಟ್ರಪತಿ ಜಗದೀಪ ಧನಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.

2024ರಲ್ಲಿ ಒಟ್ಟು 132 ಪದ್ಮ ಪ್ರಶಸ್ತಿಗೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಐದು ಪದ್ಮ ವಿಭೂಷಣ, 17 ಪದ್ಮ ಭೂಷಣ ಹಾಗೂ 110 ಪದ್ಮ ಶ್ರೀ ಪ್ರಶಸ್ತಿಗಳು ಒಳಗೊಂಡಿವೆ. ಇದರಲ್ಲಿ 30 ಮಹಿಳೆಯರೂ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.