ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ನ (ಸಿಐಎಸ್ಸಿಇ) ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಈ ಬಾರಿ ಐಸಿಎಸ್ಇ 10ನೇ ತರಗತಿಯಲ್ಲಿ ಶೇ 98.94 ಮಂದಿ ಹಾಗೂ ಐಎಸ್ಸಿ 12ನೇ ತರಗತಿಯಲ್ಲಿ ಶೇ 96.93 ಮಂದಿ ತೇರ್ಗಡೆ ಹೊಂದಿದ್ದಾರೆ.

10ನೇ ತರಗತಿಯಲ್ಲಿ ರುಶಿಲ್ ಕುಮಾರ್, ಅನನ್ಯ ಕಾರ್ತಿಕ್, ಶ್ರೇಯಾ ಉಪಾಧ್ಯಾಯ, ಅದ್ವಯ್ ಸರ್ದೇಸಾಯಿ, ಯಶ್ ಮನೀಷ್ ಭಾಸಿನ್, ತನಯ್ ಸುಶೀಲ್ ಶಾ, ಹಿಯಾ ಸಂಘವಿ, ಅವಿಶಿ ಸಿಂಗ್ ಮತ್ತು ಸಂಬಿತ್ ಮುಖ್ಯೋಪಾಧ್ಯಾಯ ಅವರು ಜಂಟಿಯಾಗಿ ಮೊದಲ ಸ್ಥಾನ ಗಳಿಸಿದ್ದಾರೆ. ಇವರೆಲ್ಲರೂ ಶೇ 99.80 ಅಂಕ ಗಳಿಸಿದ್ದಾರೆ.

12ನೇ ತರಗತಿಯಲ್ಲಿ ರಿಯಾ ಅಗರವಾಲ್, ಇಪ್ಸಿತಾ ಭಟ್ಟಾಚಾರ್ಯ, ಮೊಹಮ್ಮದ್ ಆರ್ಯನ್ ತಾರೀಖ್, ಶುಭಂ ಕುಮಾರ್ ಅಗರವಾಲ್ ಮತ್ತು ಮಾನ್ಯ ಗುಪ್ತಾ ಅವರು ಅಗ್ರ ಸ್ಥಾನ ಗಳಿಸಿದ್ದಾರೆ. ಇವರು ಶೇ 99.75 ಅಂಕ ಪಡೆದಿದ್ದಾರೆ.

‘ಒಟ್ಟು 63 ವಿಷಯಗಳಲ್ಲಿ 10ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 47 ವಿಷಯಗಳಲ್ಲಿ 12ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ’ ಎಂದು ಸಿಐಎಸ್ಸಿಇ ಕಾರ್ಯದರ್ಶಿ ಗೆರ್ರಿ ಅರಥೂನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.