ನವದೆಹಲಿ: ಭವಿಷ್ಯದ ಹವಾಮಾನ ಬದಲಾವಣೆಯಿಂದ ಉಷ್ಣವಲಯದ ಮಳೆಗಾಲದ ಅವಧಿಯಲ್ಲಿ ಏರುಪೇರಾಗಲಿದ್ದು ಇದರಿಂದ ಭಾರತದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ‘ ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ.

ನೇಚರ್ ಕ್ಲೈಮೇಟ್ ಚೇಂಜ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು ಇದರಲ್ಲಿ ವಿವಿಧ ಹವಾಮಾನವಿರುವ 27 ಮಾದರಿಗಳನ್ನು ಕಂಪ್ಯೂಟರ್ ತಂತ್ರಾಂಶ(ಸಿಮ್ಯುಲೇಷನ್)ದಲ್ಲಿ ಪರಿಶೀಲಿಸಲಾಗಿದೆ. ನಂತರ ಈ ಶತಮಾನದ ಕೊನೆಯವರೆಗೂ ಉಂಟಾಗಬಹುದಾದ ಹಸಿರು ಮನೆ ಅನಿಲಗಳ ಪರಿಣಾಮದಿಂದಾಗಿ ಭವಿಷ್ಯದಲ್ಲಿ ಉಷ್ಣವಲಯದ ಮಳೆ ಬೀಳುವ ಪ್ರದೇಶದಲ್ಲಿ ಆಗುವ ವ್ಯತ್ಯಾಸಗಳನ್ನು ಗುರುತಿಸಲಾಗಿದೆ.

ಈ ಸಂಶೋಧನೆಯ ಪ್ರಕಾರ, ಪೂರ್ವ ಆಫ್ರಿಕಾ ಮತ್ತು ಹಿಂದೂ ಮಹಾಸಾಗರದ ಮೇಲೆ ಉಷ್ಣವಲಯದ ಮಳೆಗಾಲದ ಅವಧಿಯಲ್ಲಿ ಏರುಪೇರಾಗಲಿದೆ. ಇದು ‘ದಕ್ಷಿಣ ಭಾರತದಲ್ಲಿ ಪ್ರವಾಹ ತೀವ್ರಗೊಳ್ಳಲು‘ ಕಾರಣವಾಗಬಹುದು. ಜತೆಗೆ, 2100ರ ವೇಳೆಗೆ ಜಾಗತಿಕ ಜೀವವೈವಿಧ್ಯ ಮತ್ತು ಆಹಾರ ಸುರಕ್ಷತೆಯ ಮೇಲೂ ಪರಿಣಾಮ ಬೀರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.