‘ರಾಜಕೀಯಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತಿಲ್ಲ’
ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಮಾರ್ಚ್ 21ರಂದು ಬಂಧನವಾಗಿರುವ ಕೇಜ್ರಿವಾಲ್ ಅವರನ್ನು ತಿಹಾರ್ ಕಾರಾಗೃಹದಲ್ಲಿಡಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯು ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಗೆ ಸಹಿ ಹಾಕುವಂತಿಲ್ಲ ಎಂಬ ನಿಯಮವಿದೆ. ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಯ ಸಂಪಾದಕರ ಜೊತೆಗಿನ ಸಂವಾದದಲ್ಲಿ ಪ್ರತಿಕ್ರಿಯಿಸಿದ ಡಿಜಿ (ಕಾರಾಗೃಹ) ಸಂಜಯ್ ಬನಿವಾಲ್ ‘ನ್ಯಾಯಾಂಗ ಬಂಧನಲ್ಲಿರುವ ವ್ಯಕ್ತಿಯು ಒಂದು ಕಾನೂನು ಪತ್ರಗಳು ಅಥವಾ ದೂರಿನ ಪ್ರತಿಗಳು ಮತ್ತು ರಾಜಕೀಯೇತರ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಬಹುದು. ಅಥವಾ ಕುಟುಂಬಸ್ಥರಿಗೆ ಬರೆದ ಪತ್ರ ಮತ್ತು ಆಸ್ತಿಗೆ ಸಂಬಂಧಿಸಿದ ಪತ್ರಗಳಿಗೆ ಮಾತ್ರ ಸಹಿಹಾಕಬಹುದಾಗಿದೆ’ ಎಂದರು.