ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಬಿರುಸಿನ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್, ಮೂರು ಮಹತ್ವದ ಸಮಿತಿಗಳನ್ನು ರಚಿಸಿದೆ.

ಪ್ರಮುಖರ ಸಮಿತಿ ಹಾಗೂ ಪ್ರಣಾಳಿಕೆ ಮತ್ತು ಪ್ರಚಾರ ಸಮಿತಿ ರಚಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಚಿಸಿರುವ ಈ ಸಮಿತಿಗಳಲ್ಲಿ ಬಹುತೇಕ ಹಿರಿಯ ನಾಯಕರೇ ಸ್ಥಾನ ಪಡೆದಿದ್ದಾರೆ.

ಪ್ರಮುಖರ ಸಮಿತಿಯಲ್ಲಿರುವವರು ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾಗಲೂ ಕಾರ್ಯನಿರ್ವಹಿಸಿದ್ದರು.

ಪ್ರಮುಖರ ಸಮಿತಿಯಲ್ಲಿ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಸಮಿತಿಯಲ್ಲಿ ಪಕ್ಷದ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆ ದಿವ್ಯಾ ಸ್ಪಂದನ (ರಮ್ಯಾ) ಮತ್ತು ಪ್ರಣಾಳಿಕೆ ಸಮಿತಿಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಅವರು ಇದ್ದಾರೆ.

ಪ್ರಮುಖರ ಸಮಿತಿ ಸದಸ್ಯರು

ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್, ಪಿ. ಚಿದಂಬರಂ, ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಜೈರಾಂ ರಮೇಶ್, ರಣದೀಪ್ ಸುರ್ಜೇವಾಲ್ ಮತ್ತು ಕೆ.ಸಿ.ವೇಣುಗೋಪಾಲ್

ಪ್ರಣಾಳಿಕೆ ಸಮಿತಿ ಸದಸ್ಯರು

ಪಿ. ಚಿದಂಬರಂ, ಭೂಪಿಂದರ್ ಸಿಂಗ್ ಹೂಡಾ, ಜೈರಾಂ ರಮೇಶ್, ಸಲ್ಮಾನ್ ಖುರ್ಷಿದ್, ಶಶಿ ತರೂರ್, ಕುಮಾರಿ ಶೇಲ್ಜಾ, ಮುಕುಲ್ ಸಂಗ್ಮಾ, ರಣದೀಪ್ ಸುರ್ಜೇವಾಲಾ, ಮನ್‌ಪ್ರೀತ್ ಬಾದಲ್, ಸುಷ್ಮಿತಾ ದೇವ್, ರಾಜೀವ್ ಗೌಡ, ತಾಮ್ರಧ್ವಜ ಶಾಹು, ಬಿಂದು ಕೃಷ್ಣನ್, ರಘುವೀರ್ ಮೀನಾ, ಬಾಲಚಂದ್ರ ಮುಂಗೇಕರ್, ಮೀನಾಕ್ಷಿ ನಟರಾಜನ್, ರಜನಿ ಪಾಟೀಲ್, ಸ್ಯಾಮ್ ಪಿಟ್ರೋಡಾ, ಸಚಿನ್ ರಾವ್ ಮತ್ತು ಲಲಿತೇಶ್ ತ್ರಿಪಾಠಿ

ಪ್ರಚಾರ ಸಮಿತಿ ಸದಸ್ಯರು

ರಣದೀಪ ಸುರ್ಜೇವಾಲಾ, ಆನಂದ್ ಶರ್ಮಾ, ಮನೀಷ್ ತಿವಾರಿ, ರಾಜೀವ್ ಶುಕ್ಲಾ, ಭಕ್ತ ಚರಣ ದಾಸ್, ಪ್ರವೀಣ ಚಕ್ರವರ್ತಿ, ಮಿಲಿಂದ ದಿಯೋರಾ, ಕುಮಾರ್ ಕೇತ್ಕರ್, ಪವನ್ ಖೇರಾ, ವಿಡಿ ಸತೀಶನ್, ಜೈವೀರ್ ಶೇರ್ಗಿಲ್, ದಿವ್ಯಾ ಸ್ಪಂದನಾ ಹಾಗೂ ಪ್ರಮೋದ್ ತಿವಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.