ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ಶಾಸಕ ಸಚಿನ್ ಪೈಲಟ್ ಮತ್ತು ಪತ್ನಿ ಸಾರಾ ಅಬ್ಲುಲ್ಲಾ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ವಿಷಯ ನಾಮಪತ್ರ ಸಲ್ಲಿಕೆ ವೇಳೆ ಮೊದಲ ಬಾರಿಗೆ ಬಹಿರಂಗವಾಗಿದೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಟೋಂಕ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಚಿನ್ ಪೈಲಟ್ ಮಂಗಳವಾರ ನಾಮಪತ್ರ ಸಲ್ಲಿಸಿದರು. ಅಫಿಡವಿಟ್‌ನಲ್ಲಿ ವಿವಾಹದ ಮಾಹಿತಿ ಕುರಿತ ಕಾಲಂನಲ್ಲಿ ‘ವಿಚ್ಛೇದಿತ’ ಎಂದು ನಮೂದಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರ ಮಗಳು ಸಾರಾ ಅವರನ್ನು 2004ರಲ್ಲಿ ಸಚಿನ್ ಮದುವೆಯಾಗಿದ್ದರು. ಅವರಿಗೆ ಆರಣ್ ಮತ್ತು ವಿಹಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮಕ್ಕಳಿಬ್ಬರೂ ತಮ್ಮ ಜತೆಗಿದ್ದಾರೆ ಎಂದು ನಮೂದಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಸಚಿನ್ ಅವರ ಸಂಪತ್ತು ದುಪ್ಪಟ್ಟಾಗಿರುವ ಕುರಿತೂ ಇದರಲ್ಲಿ ಮಾಹಿತಿ ಇದೆ. 2018ರಲ್ಲಿ ಅವರ ಒಟ್ಟು ಆಸ್ತಿ ಮೊತ್ತ ₹3.8 ಕೋಟಿ ಇತ್ತು. 2023ಕ್ಕೆ ₹7.5 ಕೋಟಿಗೆ ಏರಿಕೆ ಆಗಿದೆ.

‘ಮರೆತಿದ್ದೇನೆ, ಮನ್ನಿಸಿದ್ದೇನೆ’: ರಾಜಸ್ಥಾನ ಕಾಂಗ್ರೆಸ್ ಅನ್ನು ಈ ಹಿಂದೆ ಬಾಧಿಸಿದ ಘಟನೆಗಳನ್ನು ಮರೆತಿದ್ದೇನೆ ಮತ್ತು ಮನ್ನಿಸಿದ್ದೇನೆ. ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡುವ ನಿರ್ಧಾರ ಮಾಡಿದ್ದೇನೆ’ ಎಂದು ಎಂದು ನಾಮಪತ್ರ ಸಲ್ಲಿಕೆ ಬಳಿಕ ಹೇಳಿದ್ದಾರೆ.

‘ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಏನು ಹೇಳಿದ್ದಾರೋ ಅದರ ಪ್ರಕಾರವೇ ನಾನು ನಡೆದುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.