ಗಾಂಧಿನಗರ: ಗುಜರಾತ್ನ ಮತದಾರರ ಪಟ್ಟಿಯಲ್ಲಿ 18 ರಿಂದ 20 ಲಕ್ಷದಷ್ಟು ನಕಲಿ ಮತದಾರರು ಇದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಆರೋಪಿಸಿದ್ದಾರೆ.

ನಕಲಿ ಮತದಾರರು, ಚುನಾವಣೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮತದಾರರ ಪಟ್ಟಿಯಿಂದ ಆ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿ. ಜೆ. ಚಾವ್ಡ ಒತ್ತಾಯಿಸಿದ್ದಾರೆ.

ಗಾಂಧಿನಗರದಲ್ಲಿ ಮಾತನಾಡಿರುವ ಅವರು, ಮೆಹ್ಸಾನ ವಿಧಾನಸಭಾ ಕ್ಷೇತ್ರದಲ್ಲೇ 11,000 ನಕಲಿ ಮತದಾರರು ಇದ್ದಾರೆ. ಬೂತ್ ನಂಬರ್ 1ರಲ್ಲಿ 22 ನಕಲಿ ಮತದಾರರಿದ್ದಾರೆ ಎಂದು ಚಾವ್ಡ ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಕೇಜ್ರಿವಾಲ್ ಎದುರಾಳಿ: ಮನೀಷ್ ಸಿಸೋಡಿಯಾ

ನಕಲಿ ಮತದಾರರನ್ನು ಪತ್ತೆಹಚ್ಚಲು ಕಷ್ಟವೇನಿಲ್ಲ. ಪ್ರತಿ ಬ್ಲಾಕ್ನಲ್ಲಿ ಕೂಡ ನಿರ್ದಿಷ್ಟ ಸಂಖ್ಯೆಯ ಮನೆಗಳಿದ್ದು, ಅವುಗಳ ಪ್ರಕಾರ ಇಷ್ಟೇ ಮತಗಳಿರುತ್ತವೆ. ಆದರೆ, ನಕಲಿ ಮತದಾರರ ಹೆಸರು ಪಟ್ಟಿಯಲ್ಲಿ ಸೇರಿಕೊಂಡಿರುವುದರಿಂದ, ಚುನಾವಣೆಯಲ್ಲಿ ಅಕ್ರಮ ನಡೆಯುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಜಮ್ಮು-ಕಾಶ್ಮೀರದಲ್ಲಿ ಮತದಾರರ ಪಟ್ಟಿಗೆ ವಲಸಿಗರ ಸೇರಿಕೆ: ಪಿಡಿಪಿ ಪ್ರತಿಭಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.