ಗುವಾಹಟಿ: ಗಾಂಧಿ-ನೆಹರು ಕುಟುಂಬವೇ ಪಕ್ಷವನ್ನು ಮುನ್ನಡೆಸುವುದಾದರೆ ಕಾಂಗ್ರೆಸ್ ನೆಲಕಚ್ಚಲಿದೆ ಮತ್ತು ಪಂಚಾಯಿತಿ ಚುನಾವಣೆಯಲ್ಲೂ ಕೂಡ ಕಾಣಿಸದ ಹಾಗಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.

ಪಕ್ಷದ ಚುಕ್ಕಾಣಿಯನ್ನು ಗಾಂಧಿಗಳ ಕೈಗೆ ಕೊಟ್ಟು, ಪುನರುಜ್ಜೀವನಗೊಳ್ಳಬೇಕೋ ಅಥವಾ ನೆಲಕಚ್ಚುವುದನ್ನೇ ಟ್ರೆಂಡ್ ಮಾಡಿಕೊಳ್ಳಬೇಕೋ ಎನ್ನುವುದನ್ನು ಕಾಂಗ್ರೆಸ್ ನಿರ್ಧರಿಸಬೇಕಿದೆ ಎಂದು ತಿಳಿಸಿದ್ದಾರೆ.

2015ರಲ್ಲಿ ಶರ್ಮಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಚುನಾವಣೆಗಳಲ್ಲಿನ ಸತತ ಸೋಲುಗಳಿಂದ ಗಾಂಧಿ ಕುಟುಂಬದವರು ಕಾಂಗ್ರೆಸ್ ಅನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ ಗಾಂಧಿ ಕುಟುಂಬದವರೇ ಕಾಂಗ್ರೆಸ್ ಚುಕ್ಕಾಣಿ ಹಿಡಿದರೆ ಮುಂಬರುವ ದಿನಗಳಲ್ಲಿ ಪಂಚಾಯಿತಿ ಚುನಾವಣೆಗಳಲ್ಲೂ ಕೂಡ ಪಕ್ಷ ಕಣ್ಮರೆಯಾಗಲಿದೆ ಎಂದಿದ್ದಾರೆ.

ಮೇಲೇರಬೇಕೋ ಅಥವಾ ಗಾಂಧಿ ಕುಟುಂಬದವರೊಂದಿಗೆ ನೆಲ ಕಚ್ಚಬೇಕೋ ಎಂಬುದನ್ನು ಸದ್ಯ ಕಾಂಗ್ರೆಸ್ ನಿರ್ಧರಿಸಬೇಕಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.