ರಾಂಚಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ನಾಗರಿಕರಿಗೆ ₹450ಕ್ಕೆ ಅಡುಗೆ ಅನಿಲ ಸಿಲಿಂಡರ್ ನೀಡಲಾಗುವುದು. ಅವರು ನುಸುಳುಕೋರರು ಆಗಿರಲಿ, ಅಲ್ಲದೇ ಇರಲಿ’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ‘ದೇಶ ವಿರೋಧಿ’ ಎಂದು ಬಿಜೆಪಿ ಟೀಕಿಸಿದೆ.

ಪ್ರಸ್ತುತ, ಜಾರ್ಖಂಡ್ನ ಪ್ರಮುಖ ನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ ₹860ಕ್ಕೆ ಲಭ್ಯವಿದೆ. ಬಿಜೆಪಿಯು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಾಂಗ್ಲಾದೇಶದ ನುಸುಳುಕೋರರ ವಿಷಯವನ್ನು ಪ್ರಮುಖವಾಗಿಸಿದೆ.

‘ನಮ್ಮ ಸರ್ಕಾರ ರಚನೆಯಾದರೆ ಡಿಸೆಂಬರ್ 1ರಿಂದ ₹450ಕ್ಕೆ ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದೇವೆ. ಜನಸಾಮಾನ್ಯರಿಗಾಗಿ ಈ ಯೋಜನೆ ಜಾರಿಯಾಗಲಿದೆ. ಅವರು ಹಿಂದೂಗಳು, ಮುಸ್ಲಿಮರು, ನುಸುಳುಕೋರರೇ ಆಗಿರಲಿ - ಜಾರ್ಖಂಡ್ನ ಎಲ್ಲ ನಾಗರಿಕರಿಗೂ ಇದು ಅನ್ವಯವಾಗಲಿದೆ’ ಎಂದು ಬೆರ್ಮೊ ವಿಧಾನಸಭಾ ಕ್ಷೇತ್ರದ ಚಂದ್ರಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಿರ್ ಹೇಳಿದರು.

ಜೆಎಂಎಂ ಮೈತ್ರಿಕೂಟವು 'ವೋಟ್ ಬ್ಯಾಂಕ್ ರಾಜಕೀಯ'ಕ್ಕಾಗಿ ರಾಜ್ಯದಲ್ಲಿ ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿರುವ ಸಂದರ್ಭದಲ್ಲೇ ಮಿರ್, ಈ ಹೇಳಿಕೆ ನೀಡಿದ್ದಾರೆ.

ಟೀಕೆ: ಗಿರಿಡೀಹ್ ಜಿಲ್ಲೆಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ‘ನುಸುಳುಕೋರರಿಗೆ ₹450ಕ್ಕೆ ಎಲ್ಪಿಜಿ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ನ ಮಿರ್ ಹೇಳಿದ್ದಾರೆ. ಕಾಂಗ್ರೆಸ್– ಜೆಎಂಎಂ– ಆರ್ಜೆಡಿ ಮೈತ್ರಿಕೂಟವು ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಜಾರ್ಖಂಡ್ನಲ್ಲಿ ಮೊದಲ ಹಂತದ ಮತದಾನ ಬುಧವಾರ ನಡೆದಿದ್ದು, ಎರಡನೇ ಹಾಗೂ ಕೊನೆಯ ಹಂತದ ಮತದಾನ ನವೆಂಬರ್ 20ಕ್ಕೆ ನಡೆಯಲಿದೆ.

‘ಹಕ್ಕು ಕಸಿಯಲು ಅವಕಾಶ ನೀಡೆವು’

‘ಹಿಂದೂಗಳು ಮುಸ್ಲಿಮರು ಮತ್ತು ನುಸುಳುಕೋರರಿಗೆ ಕಡಿಮೆ ದರದಲ್ಲಿ ಎಲ್ಪಿಜಿ ಸಿಲಿಂಡರ್ ನೀಡುತ್ತೇವೆ ಎಂದು ಕಾಂಗ್ರೆಸ್ನ ಉಸ್ತುವಾರಿ ಭರವಸೆ ನೀಡಿದ್ದಾರೆ. ಬುಡಕಟ್ಟು ಜನರ ಹಕ್ಕು ಕಸಿದು ನುಸುಳುಕೋರರಿಗೆ ನೀಡುವುದಕ್ಕೆ ಬಿಜೆಪಿ ಬಿಡುವುದಿಲ್ಲ’ ಎಂದು ಬೊಕಾರೊದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.