ಅಹಮದಾಬಾದ್: ಗುಜರಾತ್ನಲ್ಲಿ ನಡೆದಿದ್ದ ಗೋದ್ರೋತ್ತರ ಗಲಭೆ ಪ್ರಕರಣದ ಐವರು ಆರೋಪಿಗಳನ್ನು ಇಲ್ಲಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಶನಿವಾರ ಖುಲಾಸೆಗೊಳಿಸಿದೆ.

‘2002ರಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ಆರು ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಆರೋಪಿಗಳ ಪಾತ್ರ ಇರುವುದನ್ನು ದೃಢಪಡಿಸಲು ಅಗತ್ಯ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಹೀಗಾಗಿ ಮಹೇಂದ್ರ ನಾಯಕ್, ದೇವೇಂದ್ರ ಝಾಲಾ, ದೇವೇಂದ್ರ ನಾಯಕ್, ಭರತ್ ಗೋಹಿಲ್ ಹಾಗೂ ಸಾಜಿ ಮನ್ಸೂರಿ ಎಂಬುವರನ್ನು ದೋಷ ಮುಕ್ತಗೊಳಿಸಲಾಗುತ್ತಿದೆ. ಆರೋಪಿ ಅತುಲ್ ಶಾ ಎಂಬುವರು ವಿಚಾರಣೆ ಬಾಕಿ ಇರುವಾಗಲೇ ಮೃತಪಟ್ಟಿದ್ದರು. ಹೀಗಾಗಿ ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗಿದೆ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮುಷ್ತಾಕ್ ಎ ಭಟ್ಟಿ ಶುಕ್ರವಾರ ನೀಡಿದ ತೀರ್ಪಿನಲ್ಲಿ ತಿಳಿಸಿದ್ದಾರೆ.

‘ಆರೋಪಿಗಳನ್ನು ಬೇರೆ ಬೇರೆ ಅವಧಿಯಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಗಲಭೆಯಲ್ಲಿ ಆರೋಪಿಗಳ ಕೈವಾಡ ಇರುವುದನ್ನು ನಿರೂಪಿಸುವಂತಹ ಯಾವ ಅಂಶವೂ ನ್ಯಾಯಾಲಕ್ಕೆ ಒದಗಿಸಿರುವ ಸಾಕ್ಷ್ಯಗಳಲ್ಲಿ ಉಲ್ಲೇಖಿಸಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.