ನವದೆಹಲಿ: ಕೋವಿಡ್–19ಗೆ ಒಳಗಾಗುವವರಲ್ಲಿ ಕೊರೊನಾ ವೈರಸ್, ರೋಗಿ ಗುಣಮುಖವಾದ ನಂತರವೂ ಅವರ ರಕ್ತ ಮತ್ತು ಜೀವಕೋಶಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೀವಂತವಾಗಿರುತ್ತದೆ ಎಂದು ಸಂಶೋಧನೆಯೊಂದರಲ್ಲಿ ದೃಢಪಟ್ಟಿದೆ.

ಅಮೆರಿಕದ ಕೊಲೊರಾಡೊನಲ್ಲಿ ಏರ್ಪಡಿಸಿದ್ದ ಸಮಾವೇಶವೊಂದರಲ್ಲಿ ಈ ಸಂಶೋಧನಾ ವರದಿಯನ್ನು ಮಂಡಿಸಲಾಯಿತು. ಈ ಮೂಲಕ ಕೆಲವರಲ್ಲಿ ಕೊರೊನಾ ಲಕ್ಷಣಗಳು ಹಲವು ತಿಂಗಳುಗಳು ಇರಲು ಕಾರಣವೇನು ಎಂಬ ಪ್ರಶ್ನೆಗೆ ಇದು ಉತ್ತರ ಒದಗಿಸಿತು.

ಕೊರೊನಾ ಪ್ರತಿಕಾಯವು ಸೋಂಕು ತಗುಲಿದ ನಂತರ ವ್ಯಕ್ತಿಯ ರಕ್ತದಲ್ಲಿ 14 ತಿಂಗಳವರೆಗೆ ಮತ್ತು ಜೀವಕೋಶಗಳಲ್ಲಿ ಎರಡು ವರ್ಷಗಳ ವರೆಗೆ ಜೀವಂತವಾಗಿರುತ್ತವೆ ಎಂದು ಕ್ಯಾಲಿಫೋರ್ನಿಯಾ ಮತ್ತು ಸ್ಯಾನ್‌ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯಗಳ ಸಂಶೋಧನೆಯಿಂದ ದೃಢಪಟ್ಟಿದೆ.

ಸೋಂಕಿಗೆ ಒಳಗಾದ 171 ಮಂದಿಯ ರಕ್ತದ ಮಾದರಿಗಳನ್ನು ಬಳಸಿ ಈ ಸಂಶೋಧನೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.