ಹರಿದ್ವಾರ (ಉತ್ತರಾಖಂಡ): ಗಂಗಾ ನದಿಯ ಪ್ರವಾಹಕ್ಕೆ ತುತ್ತಾಗಿದ್ದ ಹರಿದ್ವಾರ ಜಿಲ್ಲೆಯ ಲಕ್ಸರ್ ಹಾಗೂ ಖಾನ್ಪುರ ಪ್ರದೇಶಗಳಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಮೊಸಳೆಗಳು ವಸತಿ ಪ್ರದೇಶಗಳಲ್ಲೂ ಕಾಣಿಸಿಕೊಂಡಿವೆ.

ಗಂಗಾನದಿ ಮತ್ತು ಅದರ ಉಪನದಿಗಳಾದ ಬಾನ್ ಗಂಗಾ ಮತ್ತು ಸೋನಾಲಿ ನದಿಗಳ ಪ್ರವಾಹದೊಂದಿಗೆ ಬರುತ್ತಿರುವ ಮೊಸಳೆಗಳನ್ನು ಅರಣ್ಯ ಇಲಾಖೆ ಹಿಡಿದು ಮತ್ತೆ ನದಿಗಳಿಗೆ ಬಿಡುತ್ತಿದೆ.

‘ಜನವಸತಿ ಪ್ರದೇಶಗಳಿಂದ ಇಲ್ಲಿಯವರೆಗೆ ಸುಮಾರು 12 ಮೊಸಳೆಗಳನ್ನು ಹಿಡಿಯಲಾಗಿದೆ. ಅಲ್ಲದೇ ಲಕ್ಸರ್ ಹಾಗೂ ಖಾನ್ಪುರ ಪ್ರದೇಶಗಳಲ್ಲಿ ಮೊಸಳೆ ಹಿಡಿಯಲೆಂದೇ ಇಲಾಖೆ ವತಿಯಿಂದ 25 ಮಂದಿ ಸಿಬ್ಬಂದಿಯ ತಂಡವೊಂದನ್ನು ನಿಯೋಜಿಸಲಾಗಿದೆ. ಅವರು ಯಾವ ಸಮಯದಲ್ಲಾದರೂ ಲಭ್ಯರಿರುತ್ತಾರೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.