ಜಾಮ್ನಗರ(ಗುಜರಾತ್): ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಐಸ್ಕ್ರೀಮ್ನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಸುದ್ದಿಯ ಬೆನ್ನಲ್ಲೇ ಇದೀಗ ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ನಲ್ಲಿ ಸತ್ತು ಕೊಳೆತ ಸ್ಥಿತಿಯಲ್ಲಿರುವ ಕಪ್ಪೆ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಜಾಮ್ನಗರದ ಪುಷ್ಕರ್ ಧಾಮ್ ಸೊಸೈಟಿಯ ನಿವಾಸಿ ಜಾಸ್ಮಿನ್ ಪಟೇಲ್ ಎಂಬುವವರ ನಾಲ್ಕು ವರ್ಷದ ಸೊಸೆ ಖರೀದಿಸಿ ತಂದಿದ್ದ ‘ಕ್ರಂಚೆಕ್ಸ್’ ಪ್ಯಾಕೆಟ್ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ. ಮಾಹಿತಿ ಪಡೆದ ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ಕೈಗೆತ್ತಿಗೊಂಡಿದ್ದಾರೆ.

‘ಬಾಲಾಜಿ ವೇಫರ್ಸ್ ಕಂಪನಿಯ ‘ಕ್ರಂಚೆಕ್ಸ್’ ಪ್ಯಾಕೆಟ್ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ ಎಂದು ಜಾಸ್ಮಿನ್ ಪಟೇಲ್ ಎಂಬುವವರು ನಮಗೆ ದೂರು ನೀಡಿದ್ದರು. ಯಾವ ಅಂಗಡಿಯಿಂದ ಚಿಪ್ಸ್ ಖರೀದಿಸಲಾಗಿದೆಯೋ ಆ ಅಂಗಡಿಗೆ ನಿನ್ನೆ ರಾತ್ರಿಯೇ ಭೇಟಿ ನೀಡಿದ್ದೆವು. ಸತ್ತು ಕೊಳೆತ ಸ್ಥಿತಿಯಲ್ಲಿರುವ ಕಪ್ಪೆ ಪತ್ತೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ಧೃಡಪಟ್ಟಿದೆ’ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಿ. ಬಿ. ಪರ್ಮಾರ್ ತಿಳಿಸಿದ್ದಾರೆ.
.ಆನ್ಲೈನ್ನಲ್ಲಿ ತರಿಸಿದ್ದ ಐಸ್ಕ್ರೀಮ್ನಲ್ಲಿ ಮಾನವನ ಬೆರಳಿನ ತುಂಡು ಪತ್ತೆ.ಆನ್ಲೈನ್ನಲ್ಲಿ ಖರೀದಿಸಿದ Hershey's ಚಾಕೊಲೇಟ್ ಸಿರಪ್ನಲ್ಲಿ ಸತ್ತ ಇಲಿ ಪತ್ತೆ.
‘ಪಾಲಿಕೆ ಆಯುಕ್ತರ ನಿರ್ದೇಶನದಂತೆ ತನಿಖೆ ನಡೆಸಲು ಪ್ಯಾಕೆಟ್ ಮೇಲಿರುವ ಪ್ರೊಡಕ್ಷನ್ ಬ್ಯಾಚ್ ಮಾದರಿಯನ್ನು ಸಂಗ್ರಹಿಸಿದ್ದೇವೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಾಸ್ಮಿನ್ ಪಟೇಲ್, ‘ನನ್ನ ಸೊಸೆ ಮತ್ತು ನನ್ನ ಒಂಭತ್ತು ತಿಂಗಳ ಮಗಳು ಚಿಪ್ಸ್ ತಿನ್ನುತ್ತಿದ್ದರು. ಈ ವೇಳೆ ನನ್ನ ಸೊಸೆ ಪ್ಯಾಕೆಟ್ ಅನ್ನು ದೂರ ಎಸೆದಿದ್ದು, ಸತ್ತ ಕಪ್ಪೆ ಇದೆ ಎಂದು ಹೇಳಿದ್ದಳು. ಮೊದಲು ಅವಳ ಮಾತನ್ನು ನಂಬದ ನಾನು ಪರಿಶೀಲಿಸಿದ ಮೇಲೆ ಆಘಾತಗೊಂಡೆ. ತಕ್ಷಣ ಕಸ್ಟಮರ್ ಕೇರ್ ನಂಬರ್ಗೆ ಕರೆ ಮಾಡಿದ್ದು, ಅಲ್ಲಿಂದ ಸಮಾಧಾನಕರ ಉತ್ತರ ಸಿಗಲಿಲ್ಲ. ಹಾಗಾಗಿ ಆಹಾರ ಸುರಕ್ಷತಾ ಅಧಿಕಾರಿಯನ್ನು ಸಂಪರ್ಕಿಸಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.