ಬೆಂಗಳೂರು: ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ನಗರ ಪ್ರದೇಶಗಳಲ್ಲಿ ಯಾವುದೇ ವಸ್ತು ಬೇಕೆಂದರೂ ಆನ್ಲೈನ್ ಮಾರಾಟ ತಾಣಗಳಿಗೆ ಮುಗಿಬೀಳುವುದು ಸಾಮಾನ್ಯವಾಗಿದೆ.

ದಕ್ಷಿಣ ದೆಹಲಿಯ ಒಬ್ಬ ಗ್ರಾಹಕ ಆನ್ಲೈನ್ ಡೆಲಿವರಿ ತಾಣ ಬ್ಲಿಂಕಿಟ್ನಲ್ಲಿ ಕಳೆದ ವರ್ಷ 9,940 ಕಾಂಡೋಮ್ಗಳನ್ನು ಆರ್ಡರ್ ಮಾಡಿದ್ದಾರೆ. ಅಂದರೆ, ದಿನಕ್ಕೆ ಸುಮಾರು 27 ಮತ್ತು ಪ್ರತಿ ಗಂಟೆಗೆ 1ಕ್ಕೂ ಹೆಚ್ಚು!

ಹೌದು, ಈ ವರದಿ ನೋಡಿ ಎಂತವರಿಗೂ ಅಚ್ಚರಿಯಾಗಬಹುದು. ಆದರೆ, ಬ್ಲಿಂಕಿಟ್ 2023ರ ತನ್ನ ವೇದಿಕೆಯ ಟ್ರೆಂಡ್ಗಳು ಮತ್ತು ಕುತೂಹಲಕಾರಿ ಖರೀದಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಒಬ್ಬ ಗ್ರಾಹಕ ತಿಂಗಳಿಗೆ 38 ಒಳ ಉಡುಪುಗಳನ್ನು ಆರ್ಡರ್ ಮಾಡಿದ್ದಾರೆ. ಅಂದರೆ, ದಿನಕ್ಕೆ ಒಂದಕ್ಕಿಂತ ಹೆಚ್ಚು.

ಇನ್ನೊಬ್ಬ ಗ್ರಾಹಕ 2023ರಲ್ಲಿ 4,832 ಸ್ನಾನದ ಸಾಬೂನುಗಳನ್ನು ಖರೀದಿಸಿದ್ಧಾರೆ. ಅಂದರೆ, ದಿನಕ್ಕೆ ಸುಮಾರು 13! ಮತ್ತು ಪ್ರತಿ ಎರಡು ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಒಂದು ಸೋಪ್ ಮುಗಿಸುತ್ತಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಮತ್ತೊಬ್ಬ ಗ್ರಾಹಕ ವರ್ಷದಲ್ಲಿ 2,670 ಟೂತ್ ಬ್ರಷ್ ಖರೀದಿಸಿದ್ದಾರೆ. ಅಂದರೆ, ಸರಿ ಸುಮಾರು ದಿನಕ್ಕೆ 7!

ಹೈದರಾಬಾದ್ನ ಗ್ರಾಹಕರೊಬ್ಬರು 17,000 ಕೆ.ಜಿ ಅಕ್ಕಿ ಆರ್ಡರ್ ಮಾಡಿದ್ದರೆ, ಮತ್ತೊಬ್ಬರು 183 ವಿಭಿನ್ನ ಶೇಡ್ನ ಲಿಪ್ಸ್ಟಿಕ್ಸ್ ಖರೀದಿಸಿದ್ದಾರೆ.

ಬ್ಲಿಂಕಿಟ್ ಅಪ್ಲಿಕೇಶನ್ ಮಧ್ಯರಾತ್ರಿಯ ನಂತರ 3.20 ಲಕ್ಷಕ್ಕೂ ಹೆಚ್ಚು ಮ್ಯಾಗಿ ಪ್ಯಾಕೆಟ್ಗಳನ್ನು ಡೆಲಿವರಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.