ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹುವಾ ಕಮೆಂಟ್‌ ಬಗ್ಗೆ ‘ಎಕ್ಸ್‌’ಗೆ ವಿವರ ಕೇಳಿದ ಪೊಲೀಸರು

Published 8 ಜುಲೈ 2024, 16:01 IST
Last Updated 8 ಜುಲೈ 2024, 16:01 IST
ಅಕ್ಷರ ಗಾತ್ರ

 ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮ ಅವರ ಕುರಿತು ಸಂಸದೆ ಮಹುವಾ ಮೊಯಿತ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ಬಳಿಕ ಅದನ್ನು ಅಳಿಸಿ ಹಾಕಿದ್ದರ ಕುರಿತು ವಿವರಗಳನ್ನು ನೀಡುವಂತೆ ದೆಹಲಿ ಪೊಲೀಸರು ‘ಎಕ್ಸ್‌’ ಅನ್ನು ಕೋರಿದ್ದಾರೆ.  

ಉತ್ತರಪ್ರದೇಶದ ಹಾಥರಸ್‌ನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿರುವ ಸ್ಥಳಕ್ಕೆ ಭೇಟಿ ನೀಡಿದ ವಿಡಿಯೊವನ್ನು ರೇಖಾ ಶರ್ಮ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮಹುವಾ, ‘ರೇಖಾ ತನ್ನ ಬಾಸ್‌ನ ಪೈಜಾಮವನ್ನು ಹಿಡಿದುಕೊಳ್ಳುವಲ್ಲೇ ನಿರತರಾಗಿದ್ದರು’ ಎಂದು ಕಾಮೆಂಟ್‌ ಮಾಡಿದ್ದರು. ಬಳಿಕ ಅದನ್ನು ತೆಗೆದು ಹಾಕಿದ್ದರು. ಈ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಮಹುವಾ ಅವರು ಮಾಡಿದ್ದ ‘ಕಮೆಂಟ್‌’ನ ಸ್ಕ್ರೀನ್‌ಶಾಟ್ ಇವೆಯಾದರೂ ತನಿಖೆಗಾಗಿ ‘ಎಕ್ಸ್‌’ನಿಂದ ಹೆಚ್ಚಿನ ಮಾಹಿತಿ ಕೋರಲಾಗಿದೆ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಮಹುವಾ ಅವರನ್ನು ಕರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಅಸಭ್ಯ ಮತ್ತು ಅತಿರೇಕದ ಹೇಳಿಕೆಗಳಿಂದ ಮಹಿಳೆಯ ಘನತೆಗೆ ಧಕ್ಕೆಯುಂಟು ಮಾಡಿದ ಮಹುವಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ 3 ದಿನಗಳೊಳಗಾಗಿ ಆಯೋಗಕ್ಕೆ ಸಮಗ್ರ ವರದಿಯನ್ನು ನೀಡಬೇಕು‘ ಎಂದು ಆಯೋಗ ಸೂಚಿಸಿತ್ತು. 

ಭಾರತೀಯ ನ್ಯಾಯಸಂಹಿತೆಯ 79ನೇ ಕಲಂನಡಿ ಪ್ರಕರಣ ದಾಖಲಾಗಿದ್ದು, ಹೊಸ ಕಾನೂನು ಜಾರಿಯಾದ ಬಳಿಕ ಈ ಕಾಯ್ದೆಯಡಿ ದೆಹಲಿ ಪೊಲೀಸರ ವಿಶೇಷ ಘಟಕ ದಾಖಲಿಸಿದ ಮೊದಲ ಪ್ರಕರಣವಿದು.

ಮಹುವಾ ಮೊಯಿತ್ರಾ 
ಮಹುವಾ ಮೊಯಿತ್ರಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT