ನವದೆಹಲಿ: ಜೂನ್ 1 ರಿಂದ ವಾರದಲ್ಲಿ 6 ದಿನಗಳು ರಾಷ್ಟ್ರಪತಿ ಭವನ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಮಂಗಳವಾರ ಅಧಿಕೃತ ಪ್ರಕಟಣೆ ತಿಳಿಸಿದೆ.

ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ರಾಷ್ಟ್ರಪತಿ ಭವನವು ಸಾರ್ವಜನಿಕರ ಭೇಟಿಗೆ ತೆರೆದಿರುತ್ತದೆ.

ರಾಷ್ಟ್ರಪತಿ ಭವನವು ನಾಲ್ಕು ಮಹಡಿಗಳಲ್ಲಿ ಒಟ್ಟು 340 ಕೊಠಡಿಗಳನ್ನು ಹೊಂದಿದ್ದು, 2.5 ಕಿಲೋಮೀಟರ್ ಕಾರಿಡಾರ್ ಮತ್ತು 190 ಎಕರೆ ಉದ್ಯಾನವನ್ನು ಹೊಂದಿದೆ.

ರಾಷ್ಟ್ರಪತಿ ಭವನವು ಮೂರು ಸರ್ಕ್ಯೂಟ್‌ಗಳನ್ನು ಒಳಗೊಂಡಿದ್ದು, ಪ್ರಮುಖ ಕೊಠಡಿಗಳಾದ ಅಶೋಕ್ ಹಾಲ್, ದರ್ಬಾರ್ ಹಾಲ್, ಬ್ಯಾಂಕ್ವೆಟ್ ಹಾಲ್‌ಗಳು ಸೇರಿದಂತೆ ರಾಷ್ಟ್ರಪತಿ ಭವನದ ಮುಖ್ಯ ಕಟ್ಟಡ ಹಾಗೂ ಹುಲ್ಲುಹಾಸು ಸರ್ಕ್ಯೂಟ್ ಒಂದರಲ್ಲಿ ಬರುತ್ತವೆ.

ಸರ್ಕ್ಯೂಟ್ ಎರಡು ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯ ಸಂಕೀರ್ಣವನ್ನು ಒಳಗೊಂಡಿದೆ, ಆದರೆ ಸರ್ಕ್ಯೂಟ್ ಮೂರು (ಉದ್ಯಾನ ಉತ್ಸವದ ಸಮಯದಲ್ಲಿ ತೆರೆಯುತ್ತವೆ) ರಾಷ್ಟ್ರಪತಿ ಭವನದ ಪ್ರಸಿದ್ಧ ಉದ್ಯಾನವನಗಳಾದ ಅಮೃತ್ ಉದ್ಯಾನ, ಹರ್ಬಲ್ ಗಾರ್ಡನ್, ಮ್ಯೂಸಿಕಲ್ ಗಾರ್ಡನ್ ಮತ್ತು ಆಧ್ಯಾತ್ಮಿಕ ಉದ್ಯಾನಗಳ ಪ್ರವಾಸಕ್ಕೆ ಅವಕಾಶ ನೀಡಲಾಗಿದೆ.

ಪ್ರಸ್ತುತ, ಸರ್ಕ್ಯೂಟ್ ಒಂದು ಬುಧವಾರದಿಂದ ಭಾನುವಾರದವರೆಗೆ ಐದು ದಿನಗಳು ಭೇಟಿಗೆ ತೆರೆದಿರುತ್ತದೆ ಮತ್ತು ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಸರ್ಕ್ಯೂಟ್ ಎರಡಕ್ಕೆ ಭೇಟಿ ನೀಡಬಹುದು.

ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯ ಸಂಕೀರ್ಣವು ಮಂಗಳವಾರದಿಂದ ಭಾನುವಾರದವರೆಗೆ (ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ) ಸಂದರ್ಶಕರಿಗೆ ತೆರೆದಿರುತ್ತದೆ ಎಂದು ರಾಷ್ಟ್ರಪತಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಜನರು ತಮ್ಮ ಭೇಟಿಯ ಸಮಯವನ್ನು http://rashtrapatisachivalaya.gov.in/rbtour ಈ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.