ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಾಥಮಿಕ ಶಾಲೆಗಳನ್ನು ಆನ್ಲೈನ್ ಮೂಲಕವೇ ನಡೆಸುವಂತೆ ದೆಹಲಿ ಶಿಕ್ಷಣ ಇಲಾಖೆ ಸೂಚಿಸಿದೆ.

ಒಂದೊಮ್ಮೆ 6ನೇ ತರಗತಿ ನಂತರದ ವಿದ್ಯಾರ್ಥಿಗಳು ಆಫ್ಲೈನ್ ತರಗತಿಗಳನ್ನು ಬಯಸಿದರೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಶಾಲೆಯ ಮೈದಾನದಲ್ಲಿ ಆಟವಾಡುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗಿದೆ.

ದ್ವಾರಕಾದಲ್ಲಿರುವ ಐಟಿಎಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸುಧಾ ಆಚಾರ್ಯ ಅವರು ಈ ಕುರಿತು ಪ್ರತಿಕ್ರಿಯಿಸಿ, ‘ಶಾಲೆಗೆ ತೆರಳಿ ತರಗತಿಗಳನ್ನು ಕೇಳುವ ವಿದ್ಯಾರ್ಥಿಗಳಿಗಾಗಿ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಹೊರಾಂಗಣ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಒಳಾಂಗಣದಲ್ಲಿ ಓದುವುದು, ಪೇಯಿಂಟಿಂಗ್, ಕರಕುಶಲ ಕಲೆ ಹಾಗೂ ಚೆಸ್ ಮತ್ತು ಕೇರಂನಂಥ ಆಟಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ’ ಎಂದಿದ್ದಾರೆ.
.Delhi Pollution: ವಾಯುಮಾಲಿನ್ಯ ಹೆಚ್ಚಳ; ರೆಡ್ ಝೋನ್ನಲ್ಲಿ 8 ಕೇಂದ್ರಗಳು.ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ: ಸರ್ಕಾರಿ ಕಚೇರಿಗಳ ಸಮಯ ಬದಲಿಸಿದ CM ಅತಿಶಿ.
‘ಪರಿಸರ ಸ್ನೇಹಿ ಹವ್ಯಾಸಗಳನ್ನು ಉತ್ತೇಜಿಸಲಾಗುತ್ತಿದೆ. ಕಾರ್ಪೂಲಿಂಗ್, ಹೆಚ್ಚು ದ್ರವಪದಾರ್ಥಗಳ ಸೇವನೆ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚು ಇಂಬು ನೀಡಲಾಗುತ್ತಿದೆ. ಎನ್95 ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಉಸಿರಾಟದ ಸಮಸ್ಯೆ ಹಾಗೂ ಅಸ್ತಮಾ ಇರುವವರು ಹೆಚ್ಚುವರಿ ಕಾಳಜಿ ವಹಿಸಲು ತಿಳಿಸಲಾಗಿದೆ. ಅಲರ್ಜಿಗೆ ಕಾರಣವಾಗಬಹುದಾದ ಸುಗಂಧ ದ್ರವ್ಯ ಬಳಕೆ ಹಾಗೂ ಬಟ್ಟೆ ಶುಚಿಗೊಳಿಸಲು ಬಳಸುವ ಕ್ಲೀನಿಂಗ್ ಏಜೆಂಟ್ಗಳ ಬಳಕೆ ತಪ್ಪಿಸಲು ನಿರ್ದೇಶಿಸಲಾಗಿದೆ’ ಎಂದಿದ್ದಾರೆ.

ದೆಹಲಿಯ ಇಂದ್ರಪ್ರಸ್ಥ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲ ರಾಜೀವ್ ಹಸ್ಸಿಜಾ ಪ್ರತಿಕ್ರಿಯಿಸಿ, ‘ಶಿಕ್ಷಕರು ಶಾಲೆಗೆ ಬಂದು ತರಗತಿಗಳನ್ನು ನಡೆಸುತ್ತಾರೆ. ಮೈಕ್ರೊಸಾಫ್ಟ್ ಟೀಮ್ಸ್ ಮತ್ತು ಸ್ಮಾರ್ಟ್ಬೋರ್ಡ್ಗಳ ಮೂಲಕ ನಡೆಸುವಂತೆ ಹೇಳಲಾಗಿದೆ. ಪ್ರತಿ ತರಗತಿ ನಂತರ 15 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ದ್ರವಾಹಾರ ಸೇವಿಸಲು ಸಲಹೆ ನೀಡಲಾಗಿದೆ’ ಎಂದಿದ್ದಾರೆ.
.ದೆಹಲಿ ಗಾಳಿಯ ಗುಣಮಟ್ಟ 'ತೀವ್ರ ಕಳಪೆ': 418ಕ್ಕೆ ತಲುಪಿದ AQI ಸೂಚ್ಯಂಕ.ದೆಹಲಿ | ವಾಯು ಮಾಲಿನ್ಯ ತಗ್ಗಿಸಲು 106 ಹೆಚ್ಚುವರಿ ಬಸ್ಗಳ ಸಂಚಾರ: ಸಚಿವ.
5ನೇ ತರಗತಿವರೆಗೆ ಆನ್ಲೈನ್ ತರಗತಿ ನಡೆಸಲು ದೆಹಲಿ ಮುಖ್ಯಮಂತ್ರಿ ಅತಿಶಿ ಆದೇಶಿಸಿದ್ದಾರೆ. ಈ ಆದೇಶದನ್ವಯ ಶಾಲಾ ಶಿಕ್ಷಣ ನಿರ್ದೇಶನಾಲಯವು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಪಾಲಿಕೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

ಗಾಳಿ ಗುಣಮಟ್ಟ ನಿರ್ವಹಣಾ ಆಯೋಗವು ಗ್ರಾಪ್ 3 ಮುಂಜಾಗ್ರತಾ ಕ್ರಮವನ್ನು ಜಾರಿಗೆ ತಂದಿದೆ. ಶುಕ್ರವಾರ ಬೆಳಿಗ್ಗೆ 9ರ ಹೊತ್ತಿಗೆ ಗಾಳಿಯ ಗುಣಮಟ್ಟವು 411ಕ್ಕೆ ತಲುಪಿದ್ದು, ಅಪಾಯದ ಮಟ್ಟ ಮೀರಿದೆ ಎಂದಿದೆ.
.₹23 ಕೋಟಿಯ ಈ ಕೋಣ ‘ಅನ್ಮೋಲ್’ ಡಯಟ್ನಲ್ಲಿ ಬಾದಾಮಿ, ಮೊಟ್ಟೆ, ಬಾಳೆಹಣ್ಣು..!.IND vs SA 4th T20I: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.