ನವದೆಹಲಿ: ದೆಹಲಿಯ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿದ್ದರೂ ಜಿಆರ್ಎಪಿ–4ರ ಅಡಿಯಲ್ಲಿ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಳಂಬ ಏಕಾಯಿತು ಎಂದು ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

‘ಗುಣಮಟ್ಟ ನಿಯಂತ್ರಿಸಲು ಈಗ ಜಾರಿಗೊಳಿಸಿರುವ ಕಠಿಣ ಕ್ರಮಗಳನ್ನು ಸಡಿಲಗೊಳಿಸಲು ಅನುಮತಿಸುವುದಿಲ್ಲ. ಈ ಸಂಬಂಧ ನನ್ನ ಪೂರ್ವಾನುಮತಿ ಇಲ್ಲದೆ ಕ್ರಮ ತೆಗೆದುಕೊಳ್ಳಬಾರದು’ ಎಂದು ಕೋರ್ಟ್ ತಾಕೀತು ಮಾಡಿತು.

ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ಈ ಕುರಿತು ವಿಚಾರಣೆ ನಡೆಸಿತು.

ದೆಹಲಿ ಸರ್ಕಾರದ ವಕೀಲರು ವಿಚಾರಣೆಯ ಆರಂಭದಲ್ಲಿಯೇ, ಸೋಮವಾರದಿಂದ ಜಿಆರ್ಎಪಿ 4ರಡಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.

‘ಎಕ್ಯೂಐ 300 ಮತ್ತು 400ರ ತಲುಪಿದಾಗಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಈ ವಿಷಯದಲ್ಲಿ ವಿಳಂಬ ಮಾಡಿ, ಅಪಾಯವನ್ನು ಆಹ್ವಾನಿಸಿದ್ದು ಏಕೆ’ ಎಂದು ಪೀಠ ಖಾರವಾಗಿ ವಕೀಲರನ್ನು ಪ್ರಶ್ನಿಸಿತು.

ಮಾಲಿನ್ಯದ ಅಪಾಯಕಾರಿ ಏರಿಕೆಯ ಮಟ್ಟವನ್ನು ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳು ಯಾವುವು ಎಂಬುದನ್ನು ತಿಳಿಸುವಂತೆ ಪೀಠ ಸರ್ಕಾರಕ್ಕೆ ಸೂಚಿಸಿತು.

‘ವಾಯು ಗುಣಮಟ್ಟವು 450ಕ್ಕಿಂತ ಕಡಿಮೆಯಾದರೂ, ಜಿಆರ್ಎಪಿ 4ರ ಅಡಿಯಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ಸಡಿಲಗೊಳಿಸಲು ನಾವು ಅನುಮತಿಸುವುದಿಲ್ಲ. ನ್ಯಾಯಾಲಯ ತಿಳಿಸುವವರೆಗೂ ಈ ಕ್ರಮಗಳು ಮುಂದುವರಿಯಲಿವೆ’ ಎಂದು ಪೀಠ ಹೇಳಿತು.

ಮಾಸ್ಕ್ ಧರಿಸಲು ಸುತ್ತೋಲೆ: ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ತನ್ನ ಸಿಬ್ಬಂದಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.

ದೆಹಲಿಗೆ ಇಂದು ಹಿಂತಿರುಗಿದೆ. ಮಧ್ಯಾಹ್ನ 2 ಗಂಟೆಯಾದರೂ ರನ್ವೇಯಲ್ಲಿ 100 ಮೀಟರ್ ದೂರವನ್ನು ನೋಡಲು ಆಗುತ್ತಿರಲಿಲ್ಲ. ನಾನು ಇಲ್ಲಿ 40 ವರ್ಷಗಳಲ್ಲಿ ಈ ರೀತಿಯದ್ದನ್ನು ಕಂಡಿರಲಿಲ್ಲ. ದೆಹಲಿಗೆ ಎಂತಹ ದುರ್ಗತಿ ಬಂದಿತು. ಅತ್ಯುತ್ತಮ ಮತ್ತು ಅತ್ಯಾಕರ್ಷಕ ನಗರ ಈಗ ಉಸಿರುಗಟ್ಟಿರುವ ಸಾವಿನ ಬಲೆಯಾಗಿದೆ
ವಿಲಿಯಂ ಡಾಲ್ರಿಂಪಲ್ ‘ಸಿಟಿ ಆಫ್ ಜಿನ್ಸ್’ನ ಲೇಖಕ

ವಾಯು ಗುಣಮಟ್ಟ ಸೂಚ್ಯಂಕ 494ಕ್ಕೆ

ನವದೆಹಲಿ: ದೇಶದ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಸೋಮವಾರ ಮತ್ತಷ್ಟು ಹದಗೆಟ್ಟಿದ್ದು ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 484ಕ್ಕೆ ತಲುಪುವ ಮೂಲಕ ‘ತೀವ್ರ ಅಪಾಯ’ದ ಹಂತ ತಲುಪಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಎಕ್ಯೂಐ 494ಕ್ಕೆ ಏರುವ ಮೂಲಕ ವಾತಾವರಣ ಮತ್ತಷ್ಟು ಬಿಗಡಾಯಿಸಿತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.

ಇದು ಈ ಋತುವಿನಲ್ಲಿ ತಲುಪಿದ ಅತ್ಯಂತ ಕಳಪೆ ಮಟ್ಟವಾಗಿದೆ ಎಂದು ಅದು ಹೇಳಿದೆ. ದಟ್ಟವಾದ ವಿಷಕಾರಿ ಹೊಗೆಯ ಕಾರಣ ಬೆಳಿಗ್ಗೆ ಗೋಚರತೆ ಪ್ರಮಾಣವೂ ತೀವ್ರವಾಗಿ ಕುಸಿದಿತ್ತು. ಅಧಿಕಾರಿಗಳ ಪ್ರಕಾರ ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ 150 ಮೀಟರ್ನಷ್ಟು ದೂರದವರೆಗೆ ಮಾತ್ರ ಗೋಚರತೆ ಇತ್ತು

ಕೆಲವೆಡೆ ಎಕ್ಯೂಐ 500ಕ್ಕೇರಿಕೆ:

‘ಸಮೀರ್ ಆ್ಯಪ್’ ದತ್ತಾಂಶದ ಪ್ರಕಾರ ದೆಹಲಿ ವ್ಯಾಪ್ತಿಯ ದ್ವಾರಕಾ ನಜಾಫ್ಗಢ ನೆಹರೂ ನಗರ ಮತ್ತು ಮುಂಡ್ಕಾದ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಎಕ್ಯೂಐ ಮಟ್ಟ ಗರಿಷ್ಠ 500ಕ್ಕೆ ಏರಿರುವ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಮೂರು ದಿನಗಳು ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಣ್ಣಿನಲ್ಲಿ ನೀರು ಜಿನುಗಿ ಕಣ್ಣುಜ್ಜುವಂತೆ ಜನರಿಗೆ ಆಗುತ್ತಿರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಈ ಹಂತದಲ್ಲಿ ಎನ್95 ಮಾಸ್ಕ್ಗಳನ್ನು ಬಳಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ದೆಹಲಿಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ಎಕ್ಯೂಐ 441ರಷ್ಟಿತ್ತು. ಅಂದು ರಾತ್ರಿ 7 ಗಂಟೆಗೆ 457ಕ್ಕೆ ಏರಿಕೆಯಾಗಿತ್ತು. ಎಕ್ಯೂಐ 450 ದಾಟುತ್ತಿದ್ದಂತೆ ವಾಯುಗುಣಮಟ್ಟ ನಿರ್ವಹಣೆ ಆಯೋಗವು ದೆಹಲಿ ಎನ್ಸಿಆರ್ನಲ್ಲಿ ‘ಜಿಆರ್ಎಪಿ –4’ (ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್) ನಿರ್ಬಂಧಗಳನ್ನು ಜಾರಿಗೊಳಿಸಲು ಆದೇಶಿಸಿತು.

ದೆಹಲಿ ಸರ್ಕಾರವು ಸೋಮವಾರ ಬೆಳಿಗ್ಗೆಯಿಂದ ಟ್ರಕ್ಗಳ ಪ್ರವೇಶ ನಿಷೇಧ ಸಾರ್ವಜನಿಕ ನಿರ್ಮಾಣ ಯೋಜನೆಗಳನ್ನು ಸ್ಥಗಿತ ಸರ್ಕಾರಿ ಮತ್ತು ಮುನ್ಸಿಪಲ್ ಸಿಬ್ಬಂದಿಯ ಕಚೇರಿ ಸಮಯ ಬದಲು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.

ಅಧಿಕಾರಿಗಳ ಸಂಘದ ಮನವಿ

ದೆಹಲಿಯ ವಾಯು ಗುಣಮಟ್ಟ ತೀವ್ರ ಅಪಾಯಕಾರಿ ಮಟ್ಟ ತಲುಪಿರುವುದರಿಂದ ಸಿಬ್ಬಂದಿಗೆ ಮನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಮತ್ತು ಕೆಲಸದ ಅವಧಿಯನ್ನು ಕಡಿತಗೊಳಿಸಬೇಕು ಎಂದು ಕೇಂದ್ರ ಸಚಿವಾಲಯದ ಸೇವಾ ಅಧಿಕಾರಿಗಳ ಸಂಘ ಮನವಿ ಮಾಡಿದೆ. ಕೆಲಸದ ಜಾಗದಲ್ಲಿ ಗಾಳಿ ಶುದ್ಧೀಕರಣ ಯಂತ್ರಗಳನ್ನು ಅಳವಡಿಸುವಂತೆಯೂ ಒತ್ತಾಯಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಬಿಜೆಪಿಯಿಂದ ಮಾಸ್ಕ್ ವಿತರಣೆ

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ಅಪಾಯಕಾರಿ ಮಟ್ಟ ತಲುಪಿದ ಕಾರಣ ದೆಹಲಿಯ ಬಿಜೆಪಿ ಘಟಕವು ಮೆಟ್ರೊ ನಿಲ್ದಾಣಗಳ ಹೊರಗೆ ಮಾಸ್ಕ್ ವಿತರಣಾ ಅಭಿಯಾನ ನಡೆಸಿತು. ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ ಶಾಸಕ ವಿಜೇಂದರ್ ಗುಪ್ತಾ ಸಂಸದರಾದ ರಾಮ್ವೀರ್ ಸಿಂಗ್ ಬಿಧುರಿ ಪ್ರವೀಣ್ ಖಂಡೇಲ್ವಾಲ್ ಮತ್ತು ಇತರ ಮುಖಂಡರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ದೆಹಲಿಯ ಎಎಪಿ ಸರ್ಕಾರವು ಇಲ್ಲಿನ ಮಾಲಿನ್ಯ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಸಚ್ದೇವ ಟೀಕಿಸಿದರು. ಕಳೆದ 10 ವರ್ಷಗಳಲ್ಲಿ ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಎಎಪಿ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡಿಲ್ಲ ಎಂದು ಅವರು ದೂರಿದರು. ––– ಬಿಜೆಪಿ ವಿರುದ್ಧ ದೆಹಲಿ ಸಿ.ಎಂ ವಾಗ್ದಾಳಿ ನವದೆಹಲಿ (ಪಿಟಿಐ): ದೆಹಲಿ ವಾಯು ಮಾಲಿನ್ಯದ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಆತಿಶಿ ಆರೋಪಿಸಿದ್ದಾರೆ. ಬಿಜೆಪಿ ಆಡಳಿತವಿರುವ ಹರಿಯಾಣ ರಾಜಸ್ಥಾನ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಎಎಪಿ ಆಡಳಿತವಿರುವ ಪಂಜಾಬ್ನಲ್ಲಿ ಮಾತ್ರ ಕೃಷಿ ತ್ಯಾಜ್ಯ ಸುಡುವುದು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಆದರೆ ಕೇಸರಿ ಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ನಿರ್ಲಕ್ಷ್ಯವಹಿಸಲಾಗಿದೆ ಎಂದು ಅವರು ದೂರಿದರು. –––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.