ಚೆನ್ನೈ: ಭಾರೀ ಮಳೆಯಿಂದ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಹೆಲಿಕಾಪ್ಟರ್ಗಳನ್ನು ನಿಯೋಜಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಸ್ಟಾಲಿನ್, ‘ನೆರೆಯಲ್ಲಿ ಸಿಲುಕಿದವರನ್ನು ರಕ್ಷಿಸಲು ನೌಕಾಪಡೆ ಹಾಗೂ ಕರಾವಳಿ ನೌಕಾಪಡೆಯ ತಲಾ ಎರಡರಂತೆ ನಾಲ್ಕು ಹೆಲಿಕಾಪ್ಟರ್ಗಳು ಸದ್ಯ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಕಾರ್ಯದೊಂದಿಗೆ ನೆರೆಯಲ್ಲಿ ಸಿಲುಕಿದವರಿಗೆ ಆಹಾರ ಪೊಟ್ಟಣ ನೀಡುವ ಕೆಲಸವನ್ನೂ ಮಾಡುತ್ತಿವೆ’ ಎಂದಿದ್ದಾರೆ.

‘ಆದರೆ ಹಾನಿಗೀಡಾದ ಪ್ರದೇಶ ವ್ಯಾಪ್ತಿ ಇನ್ನೂ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯ ಇನ್ನಷ್ಟು ಚುರುಕುಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಹೆಲಿಕಾಪ್ಟರ್ ನಿಯೋಜನೆ ಅಗತ್ಯ’ ಎಂದು ತಮ್ಮ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ.
.ತಮಿಳುನಾಡಿನಲ್ಲಿ ಭಾರೀ ಮಳೆ: ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ 800 ಪ್ರಯಾಣಿಕರು.ಕೇರಳದಲ್ಲಿ ವ್ಯಾಪಕ ಮಳೆ: ಅಪಾಯದ ಮಟ್ಟ ತಲುಪಿದ ಮುಲ್ಲಪೆರಿಯಾರ್ ಜಲಾಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.