ನವದೆಹಲಿ: ‘ಮಧ್ಯಪ್ರಾಚ್ಯ ಪ್ರದೇಶದ ವಾಯು ಪ್ರದೇಶದಲ್ಲಿ ಜಾಗತಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ (ಜಿಎನ್‌ಎಸ್‌ಎಸ್) ನಿಷ್ಕ್ರಿಯೆಗೊಳ್ಳುತ್ತಿರುವ ಹಾಗೂ ವಂಚಿಸುತ್ತಿರುವ ಕುರಿತು ವರದಿಗಳಾಗುತ್ತಿದೆ. ಇದರಿಂದ ವಿಮಾನಗಳು ಕುರುಡಾಗಿ ಹಾರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ವಹಿಸುವಂತೆ ಸುತ್ತೋಲೆ ಹೊರಡಿಸಿದೆ.

ಎದುರಾಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ವಿಮಾನ ನಿರ್ವಹಣೆ ಮಾಡುವವರಿಗೆ, ಪೈಲೆಟ್‌ಗಳಿಗೆ ಹಾಗೂ ವಾಯುಯಾನ ದಿಕ್ಸೂಚಿ ಸೇವಾ ಪೂರೈಕೆದಾರರಿಗೆ ಹಾಗೂ ವಾಯು ಸಂಚಾರ ನಿಯಂತ್ರಿಕರಿಗೆ ಸುತ್ತೋಲೆಯಲ್ಲಿ ಹೇಳಲಾಗಿದೆ. ಸುರಕ್ಷಿತ ವಾಯುಯಾನಕ್ಕೆ ಅನುಕೂಲವಾಗುವ ಸಾಧನಗಳ ತಯಾರಕರು ಮತ್ತು ಅವುಗಳ ನಿರ್ವಹಿಸುವವರೊಂದಿಗೆ ಸಮನ್ವಯ ಸಾಧಿಸುವಂತೆ ಹೇಳಲಾಗಿದೆ.
.Bengaluru Kambala | ಕರೆ ಪರೀಕ್ಷೆಯ ‘ಕುದಿ ಕಂಬಳ’ಕ್ಕೆ ಚಾಲನೆ.ಮತ್ತೆ ಹದಗೆಟ್ಟ ದೆಹಲಿ ಗಾಳಿಯ ಗುಣಮಟ್ಟ: 401ಕ್ಕೆ ತಲುಪಿದ AQI ಸೂಚ್ಯಂಕ.
‘ಜಿಎನ್‌ಎಸ್‌ಎಸ್ ನಿಷ್ಕ್ರಿಯೆಗೊಳ್ಳುವ ಹಾಗೂ ವಂಚಿಸುವ ಅಪಾಯಗಳ ಕುರಿತು ಎಚ್ಚರ ಅಗತ್ಯ. ಹಲವು ಭೂಪ್ರದೇಶಗಳಲ್ಲಿ ಇಂಥ ಘಟನೆಗಳು ಸಂಭವಿಸುತ್ತಿರುವುದು ಪತ್ತೆಯಾಗಿದೆ. ವಿಮಾನಗಳಿಗೆ ತಪ್ಪು ಸಂದೇಶ ನೀಡುವ ಮೂಲಕ ನ್ಯಾವಿಗೇಷನ್ ವ್ಯವಸ್ಥೆಯನ್ನೇ ಬದಲಿಸುವ ಯತ್ನವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ವಿಮಾನ ಹಾಗೂ ಭೂಮಿ ಮೇಲಿರುವ ನಿಯಂತ್ರಣ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಡಿಜಿಸಿಎ ಹೇಳಿದೆ.

ಇದಕ್ಕಾಗಿಯೇ ಸಮಿತಿ ರಚಿಸಿರುವ ಡಿಜಿಸಿಎ, ಜಾಗತಿಕ ಮಟ್ಟದ ಪರಿಣಿತರೊಂದಿಗೆ ಚರ್ಚಿಸಲು ನಿರ್ಧಾರ ತೆಗೆದುಕೊಂಡಿದೆ. ಜತೆಗೆ ಸದ್ಯ ಇರುವ ವಾಯುಯಾನ ಮಾರ್ಗಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಇದಕ್ಕಾಗಿ ಕಾರ್ಯಯೋಜನೆ ಸಿದ್ಧಪಡಿಸುವ ಸಲಹೆಯನ್ನೂ ನೀಡಿದೆ.
.ಅವಹೇಳನಕಾರಿ ಹೇಳಿಕೆ: ನಟಿ ತ್ರಿಶಾ ಬಳಿ ಕ್ಷಮೆ ಕೇಳಿದ ಖಳನಟ ಮನ್ಸೂರ್ ಅಲಿ ಖಾನ್.‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ವಿಮರ್ಶೆ: ತಾಳ್ಮೆ ಬೇಡುವ ಹೆಣಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.