ನವದೆಹಲಿ: ವೈದ್ಯರು ನಾಮಫಲಕ, ವಿಸಿಟಿಂಗ್ ಕಾರ್ಡ್ ಅಥವಾ ಘೋಷಣೆಗಳ ಮೂಲಕ ಜನರನ್ನು ಹಾದಿ ತಪ್ಪಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತಿಳಿಸಿದೆ.

ವೈದ್ಯರು ತಮ್ಮ ಕ್ಲಿನಿಕ್‌ಗಳ ಮುಂದೆ ಅತಿ ದೊಡ್ಡದಾದ ನಾಮಫಲಕವನ್ನು ಅಳವಡಿಸಬಾರದು. ತಮ್ಮ ಹೆಸರು, ವಿದ್ಯಾರ್ಹತೆ, ಪದವಿ, ವಿಶೇಷತೆ ಅಥವಾ ನೋಂದಣಿ ಸಂಖ್ಯೆ ಬಿಟ್ಟು ಬೇರೇನನ್ನೂ ಅದರ ಮೇಲೆ ಬರೆಯಬಾರದು. ರೋಗಿಗಳಿಗೆ ನೀಡುವ ಪ್ರಿಸ್‌ಕ್ರಿಪ್ಶನ್ ಕಾಗದದ ಮೇಲೂ ಅಷ್ಟೇ ಮಾಹಿತಿ ಇರಬೇಕು ಎಂದು ಎನ್ಎಂಸಿ ಸಲಹೆ ನೀಡಿದೆ.

ಔಷಧ ಅಂಗಡಿ, ತಾವು ವಾಸಿಸದ ಅಥವಾ ಕೆಲಸ ಮಾಡದ ಸ್ಥಳಗಳಲ್ಲಿ ನಾಮಫಲಕಗಳನ್ನು ಅಳವಡಿಸುವುದು ಸರಿಯಲ್ಲ ಎಂದೂ ಎನ್‌ಎಂಸಿಯ ನೀತಿ ನಿಯಮಗಳು ಮತ್ತು ವೈದ್ಯಕೀಯ ನೋಂದಣಿ ಮಂಡಳಿಯು (ಇಎಂಆರ್‌ಬಿ) ತನ್ನ ಇ–ಬುಕ್‌ನಲ್ಲಿ ತಿಳಿಸಿದೆ.

ವೈದ್ಯರು ಮತ್ತು ರೋಗಿಗಳ ನಡುವಣ ವಿಶ್ವಾಸದ ಕೊರತೆಯು ವ್ಯಾಜ್ಯಕ್ಕೆ ಕಾರಣವಾಗುತ್ತದೆ. ವೈದ್ಯರ ವಿರುದ್ಧದ ದೂರುಗಳಿಗೆ ಪ್ರಮುಖ ಕಾರಣವೇ ಸಂವಹನ ಕೊರತೆ ಎಂದೂ ಅದು ಹೇಳಿದೆ.

ಹಾಗೆಯೇ ವೈದ್ಯರು ವಿವಿಧ ವಿಷಯಗಳ ಕುರಿತು ತರಬೇತಿ ಮತ್ತು ಕೌಶಲಗಳನ್ನು ಹೊಂದಿರಬಹುದು. ಆದರೆ ನಿರ್ದಿಷ್ಟ ಕ್ಷೇತ್ರದಲ್ಲಿ ಅರ್ಹತೆ ಪಡೆದವರು ಮಾತ್ರ ‘ಕನ್ಸಲ್‌ಟಂಟ್/ ಸ್ಪೆಷಲಿಸ್ಟ್’ ಎಂದು ಕರೆದುಕೊಳ್ಳಬಹುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.