ನವದೆಹಲಿ: ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸ್ ಆರಂಭಿಸಲು ಬಯಸುವ ಆಸ್ಪತ್ರೆಗಳಿಗಾಗಿ ಹೊಸ ಕರಡು ಮಾರ್ಗದರ್ಶಿ ಸೂತ್ರಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಶುಕ್ರವಾರ ಬಿಡುಗಡೆ ಮಾಡಿದೆ.

ಅದರ ಪ್ರಕಾರ, ಹೊಸದಾಗಿ ಕೋರ್ಸ್ ಆರಂಭಿಸಲು ಬಯಸುವ ಆಸ್ಪತ್ರೆಗಳಲ್ಲಿ ಕನಿಷ್ಠ 200 ಹಾಸಿಗೆಗಳ ಸಾಮರ್ಥ್ಯದ ಸೌಲಭ್ಯವಿರಬೇಕು, ಇದರಲ್ಲಿ ಶೇ 75ರಷ್ಟು ವರ್ಷಪೂರ್ತಿ ಬಳಕೆಯಾಗಿರಬೇಕು. ಸ್ನಾತಕೋತ್ತರ ಪದವಿ ತರಬೇತಿಗಾಗಿ ನಿಯೋಜಿಸುವ ಒಟ್ಟು ಹಾಸಿಗೆಗಳಲ್ಲಿ ಶೇ 15 ರಷ್ಟು ಹಾಸಿಗೆಗಳು ತೀವ್ರ ನಿಗಾ ಘಟಕಕ್ಕೆ (ಐಸಿಯು) ಅಥವಾ ಎಚ್‌ಡಿಯು ಘಟಕಕ್ಕೆ ಸಂಬಂಧಿಸಿದ್ದಾಗಿರಬೇಕು ಎಂದು ತಿಳಿಸಿದೆ.

ಅಲ್ಲದೆ, ಆಸ್ಪತ್ರೆಗಳು ಕಡ್ಡಾಯವಾಗಿ ಜೀವರಾಸಾಯನ ವಿಜ್ಞಾನ, ನರರೋಗ, ಸೂಕ್ಷ್ಮಜೀವವಿಜ್ಞಾನ ಮತ್ತು ರೇಡಿಯೊ ಡಯಾಗ್ನೋಸಿಸ್ ವಿಭಾಗಗಳನ್ನು ಹೊಂದಿರಬೇಕು ಎಂದು ಮಾರ್ಗದರ್ಶಿ ಸೂತ್ರಗಳಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸಾರ್ವಜನಿಕರು ತಮ್ಮ ಸಲಹೆಗಳನ್ನು ಸೆಪ್ಟೆಂಬರ್ 15ರವರೆಗೂ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.