ನವದೆಹಲಿ: ಹಣ ಅಕ್ರಮ ವರ್ಗಾವಣೆ, ಬ್ಯಾಂಕುಗಳಿಗೆ ವಂಚಿಸಿದ ಆರೋಪ ಹೊತ್ತು, ದೇಶಭ್ರಷ್ಟರಾಗಿರುವ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರ ಒಡೆತನ ಸಂಸ್ಥೆಗಳಿಗೆ ಸೇರಿದ ವಜ್ರ ಹಾಗೂ ಮುತ್ತುಗಳನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಹಾಂಗ್ಕಾಂಗ್ನಿಂದ ಭಾರತಕ್ಕೆ ಬುಧವಾರ ತಂದಿದ್ದಾರೆ.

ವಜ್ರ, ಮುತ್ತುಗಳು ಹಾಗೂ ಬೆಳ್ಳಿಯ ಆಭರಣಗಳ ಒಟ್ಟು ತೂಕ 2,300 ಕೆ.ಜಿ ಇದ್ದು, ಇವುಗಳ ಮೌಲ್ಯ ₹ 1,350 ಕೋಟಿ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ವಜ್ರಾಭರಣಗಳಿರುವ ಒಟ್ಟು 108 ಸರಕುಗಳನ್ನುಮುಂಬೈನ ಬಂದರಿನಲ್ಲಿ ತಂದಿಳಿಸಲಾಯಿತು. ಈ ಪೈಕಿ 32 ಸರಕುಗಳು ನೀರವ್ ಮೋದಿ ಸ್ವಾಮ್ಯದ ಕಂಪನಿಗಳಿಗೆ ಸೇರಿದ್ದರೆ, ಉಳಿದವು ಚೋಕ್ಸಿ ಒಡೆತನದ ಸಂಸ್ಥೆಗಳಿಗೆ ಸೇರಿದವು ಎಂದೂ ತಿಳಿಸಿದ್ದಾರೆ.

ಈ ಇಬ್ಬರು ವಜ್ರ ವ್ಯಾಪಾರಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಮುಂಬೈ ಶಾಖೆಗೆ ಒಟ್ಟು 15 ಸಾವಿರ ಕೋಟಿ ವಂಚಿಸಿದ್ದಾರೆ ಎಂಬ ಆರೋಪ ಇದ್ದು, ಇ.ಡಿ ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.