ಜೈಪುರ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ತನಿಖೆ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೊತಸ್ರ ಅವರ ಜೈಪುರ ಮತ್ತು ಸಿಕಾರ್ ನಿವಾಸಗಳ ಮೇಲೆ ದಾಳಿ ನಡೆಸಿದೆ.

ಟ್ರೈಟನ್ ಹೋಟೆಲ್ ಮತ್ತು ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಪುತ್ರ ವೈಭವ್ ಗೆಹಲೋತ್ ಅವರಿಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ಮಾಜಿ ಶಿಕ್ಷಣ ಸಚಿವ ದೋತಸ್ರ ಅವರ ನಿವಾಸ ಹೊರತಾಗಿ, ದೌಸಾದ ಮಹುವಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಓಂಪ್ರಕಾಶ್ ಹುಡ್ಲಾ ಮತ್ತು ಇತರರ ನಿವಾಸಗಳಲ್ಲಿಯೂ ತನಿಖಾ ಸಂಸ್ಥೆ ಶೋಧ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆ ಅಡಿ ಈ ದಾಳಿ ನಡೆಸಲಾಗಿದೆ. ದೋತಸ್ರ ಅವರು ಸಿಕಾರ್ನ ಲಕ್ಷ್ಮಣಗಢ ಕ್ಷೇತ್ರದಿಂದ ಬಿಜೆಪಿಯ ಸುಭಾಷ್ ಮಹಾರಿಯಾ ವಿರುದ್ಧ ಸ್ಪರ್ಧಿಸಿದ್ದಾರೆ. ಪಕ್ಷೇತರ ಶಾಸಕ ಹುಡ್ಲಾ ಅವರನ್ನು ಕಾಂಗ್ರೆಸ್ ಈ ಬಾರಿ ಮಹುವಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಈ ನಡುವೆ ದೊತಸ್ರ ಅವರು ‘ಸತ್ಯಮೇವ ಜಯತೇ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆರೋಪಿಗಳು 2022ರ ಡಿ.21, ಡಿ.22 ಮತ್ತು 24ರಂದು ಆರ್ಪಿಎಸ್ಸಿ (ರಾಜಸ್ಥಾನ ಲೋಕಸೇವಾ ಆಯೋಗ) ನಡೆಸಲು ನಿರ್ಧರಿಸಿದ್ದ ಹಿರಿಯ ಶಿಕ್ಷಕರ ಗ್ರೇಡ್ 2 ಸ್ಪರ್ಧಾತ್ಮಕ ಪರೀಕ್ಷೆ, 2022ರ ಸಾಮಾನ್ಯ ಜ್ಞಾನದ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ. ಅವುಗಳನ್ನು ಅಭ್ಯರ್ಥಿಗಳಿಗೆ ₹8-10 ಲಕ್ಷಕ್ಕೆ ನೀಡಲಾಗಿದೆ ಎಂದು ಇ.ಡಿ ಆರೋಪಿಸಿದೆ.

ಈ ಪ್ರಕರಣದಲ್ಲಿ ಆರ್ಪಿಎಸ್ಸಿ ಮಾಜಿ ಸದಸ್ಯ ಬಾಬುಲಾಲ್ ಕಟಾರಾ ಮತ್ತು ಅನಿಲ್ ಕುಮಾರ್ ಮೀನಾ, ಭೂಪೇಂದ್ರ ಸರನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಇ.ಡಿ ದಾಳಿ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಚುನಾವಣೆಯಲ್ಲಿ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ತನಿಖಾ ಸಂಸ್ಥೆಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಜನರು ಬಿಜೆಪಿಗೆ ಸೂಕ್ತ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದೆ.

‘ವೈಭವ್ ಮತ್ತು ಟ್ರೈಟನ್ ನ ರತನ್ ಶರ್ಮಾ ಈ ಹಿಂದೆ ಪಾಲುದಾರರಾಗಿದ್ದರು ಮತ್ತು ತಲಾ ₹ 25 ಲಕ್ಷ ಹೂಡಿಕೆ ಮಾಡಿದ್ದರು. ಈಗ ಅವರು ಪ್ರತ್ಯೇಕವಾಗಿದ್ದಾರೆ ಮತ್ತು ವಿಭಿನ್ನ ಕಂಪನಿಗಳಾಗಿವೆ’ ಎಂದು ಅಶೋಕ್ ಗೆಹಲೋತ್ ತಿಳಿಸಿದ್ದಾರೆ.

ಇದು 12 ವರ್ಷದ ಹಿಂದಿನ ಪ್ರಕರಣ. ಈಗಾಗಲೇ ಉತ್ತರಗಳನ್ನು ನೀಡಿದ್ದೇನೆ. ಫೇರ್ ಮಾಂಟ್ ಹೋಟೆಲ್ನಲ್ಲಿ ಟ್ಯಾಕ್ಸಿ ವ್ಯವಹಾರ ನಡೆಸುತ್ತಿದ್ದೇನೆ ಮತ್ತು ಪ್ರಕರಣ ಆ ಹೋಟೆಲ್ಗೆ ಸಂಬಂಧಿಸಿದೆ
ವೈಭವ್ ಗೆಹಲೋತ್ ಸಿ.ಎಂ ಅಶೋಕ್ ಗೆಹಲೋತ್ ಮಗ

‘ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳು ಚುನಾವಣೆ ಬಂದ ಕೂಡಲೇ ಬಿಜೆಪಿ ಪಕ್ಷದ ಕಾರ್ಯಕರ್ತರ ರೀತಿ ಕೆಲಸ ಮಾಡುತ್ತವೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

‘ರಾಜಸ್ಥಾನದಲ್ಲಿ ತನ್ನ ಸೋಲು ಖಚಿತವಾಗುತ್ತಿದ್ದಂತೆ ಬಿಜೆಪಿ ತನ್ನ ಕೊನೆಯ ದಾಳ ಎಸೆದಿದೆ. ಛತ್ತೀಸಗಢದ ನಂತರ, ಜಾರಿ ನಿರ್ದೇಶನಾಲಯವು ರಾಜಸ್ಥಾನಕ್ಕೂ ಪ್ರವೇಶಿಸಿದೆ. ಮೋದಿ ಸರ್ಕಾರದ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ’ ಎಂದು ಖರ್ಗೆ ’ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ತೊಂದರೆಗೀಡಾದ 70 ಲಕ್ಷ ಯುವಜನರಿಗೆ ನ್ಯಾಯ ಒದಗಿಸಲು ಇ.ಡಿ ದಾಳಿ ನಡೆಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು 19 ಪ್ರಶ್ನೆಪತ್ರಿಕೆ ಸೋರಿಕೆ ಆಗಿವೆ ಮತ್ತು ಈ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖ ಪಾತ್ರ ವಹಿಸಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಹೊರಬೀಳಲಿದೆ.

ಭೀತಿ ಮೂಡಿಸಲು ಇ.ಡಿ ದಾಳಿ : ಗೆಹಲೋತ್

‘ರಾಜ್ಯ ಸರ್ಕಾರ ಉರುಳಿಸಲು ಸಾಧ್ಯವಾಗದ ಕಾರಣ ಇ.ಡಿ ದಾಳಿಗಳ ಮೂಲಕ ಬಿಜೆಪಿ ನಮ್ಮನ್ನು ಗುರಿಯಾಗಿಸುತ್ತಿದೆ. ದೇಶದಲ್ಲಿ ಭೀತಿ ಮೂಡಿಸುತ್ತಿದೆ. ಎಲ್ಲಿ ಚುನಾವಣೆ ನಡೆದರೂ ತನಿಖಾ ಸಂಸ್ಥೆಗಳ ದಾಳಿಗಳು ನಡೆಯುತ್ತವೆ. ಅದು ಛತ್ತೀಸಗಢ ಕರ್ನಾಟಕ ಅಥವಾ ಹಿಮಾಚಲ ಪ್ರದೇಶವೇ ಆಗಿರಲಿ. ಚುನಾವಣೆಗೆ ಮೊದಲು ಇ.ಡಿ ದಾಳಿ ನಡೆಸಿದೆ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದರು. ಅಂಕಿ ಅಂಶ ಪ್ರಕಾರ ಯುಪಿಎ ಆಡಳಿತದ ಹತ್ತು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ 112 ಶೋಧ ನಡೆಸಿ 104 ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಆದರೆ 2014ರ ಬಳಿಕ 3010 ದಾಳಿಗಳು ನಡೆದಿದ್ದು 881 ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು. ರಾಜ್ಯದಲ್ಲಿ ಮಹಿಳೆಯರು ರೈತರು ಮತ್ತು ಬಡವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಲಾಭ ಪಡೆಯುವುದನ್ನು ಬಿಜೆಪಿ ಬಯಸುವುದಿಲ್ಲ ಎಂದು ಟೀಕಿಸಿದರು.

ಗೆಹಲೋತ್ ಬೆಂಬಲಕ್ಕೆ ಪೈಲಟ್

ನವದೆಹಲಿ: ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಪುತ್ರ ವೈಭವ್ ಗೆಹಲೋತ್ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮುಖ್ಯಮಂತ್ರಿ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಸಿ.ಎಂ ಗಾದಿಗಾಗಿ ನಡೆಯುತ್ತಿರುವ ಪೈಪೋಟಿಯಿಂದ ಹಿಂದೆ ಸರಿಯುವುದಿಲ್ಲ ಎಂಬ ನಿಲುವನ್ನೂ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭಾ ಚುನವಾಣೆ ಹೊಸ್ತಿಲಲ್ಲಿ ನಿಂತಿರುವ ರಾಜ್ಯದಲ್ಲಿ ಈ ದಾಳಿ ನಡೆದಿರುವುದು ‘ಸಂಶಯಾಸ್ಪದ’ ಮತ್ತು ‘ಬೆದರಿಕೆ ಒಡ್ಡುವುದಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ಯಾವುದೇ ಕಾಂಗ್ರೆಸ್ ನಾಯಕರು ನಿಷ್ಪಕ್ಷಪಾತ ತನಿಖೆಗೆ ಹೆದರುವುದಿಲ್ಲ. ಆದರೆ ರಾಜಸ್ಥಾನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಹಳೆಯ ಪ್ರಕರಣಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ. ಇದರ ವಿರುದ್ಧ ಹೋರಾಡುತ್ತೇವೆ. ಕಿರುಕುಳ ನೀಡಲು ಮತ್ತು ಬೆದರಿಸಲು ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ದುರುಪಯೋಗಪಡಿಸಿಕೊಳ್ಳುವ ಅಭ್ಯಾಸವನ್ನು ಬಿಜೆಪಿ ಹೊಂದಿದೆ‘ ಎಂದರು.

ಸಿ.ಎಂ ಹುದ್ದೆ ಕುರಿತು ಅಶೋಕ್ ಗೆಹಲೋತ್ ಹೇಳಿಕೆ ಪ್ರತಿಕ್ರಿಯಿಸಿದ ಪೈಲಟ್ ಇದು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯವಲ್ಲ. ಭವಿಷ್ಯದ ಬಗ್ಗೆ ಯಾರಿಗೂ ತಿಳಿದಿಲ್ಲ ಮತ್ತು ಅವರೆಲ್ಲರೂ ವರ್ತಮಾನದಲ್ಲಿ ಕೆಲಸ ಮಾಡುತ್ತಾರೆ. ನಾವೆಲ್ಲರೂ ಭೂತಕಾಲದಿಂದ ಕಲಿಯುತ್ತೇವೆ ಮತ್ತು ವರ್ತಮಾನಕ್ಕೆ ಅನುಗುಣವಾಗಿ ವರ್ತಿಸುತ್ತೇವೆ. ಭವಿಷ್ಯದಲ್ಲಿ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಉದ್ದೇಶ. ನಿರ್ದಿಷ್ಟ ವ್ಯಕ್ತಿಗೆ ಯಾವ ಜವಾಬ್ದಾರಿ ನೀಡಲಾಗುವುದು ಎಂಬುದನ್ನು ನಂತರ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.