ನವದೆಹಲಿ: ಒಂದರಿಂದ ಐದನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಹತೆ ಪಡೆಯಬೇಕಾದರೆ ಇನ್ನು ಮುಂದೆ ಬಿ.ಇಡಿ ಪದವಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಗಳಿಸಿರಲೇಬೇಕು.

ಶಿಕ್ಷಕರಾಗಿ ನೇಮಕಾತಿಯಾಗುವ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ಅರ್ಹತೆಗಳ ನಿಯಮಾವಳಿಗೆ ಎನ್‌ಸಿಟಿಇ ತಿದ್ದುಪಡಿ ಮಾಡಿದೆ.

‘ಬಿ.ಇಡಿ ಮತ್ತು ಪ್ರೌಢಶಿಕ್ಷಣದಲ್ಲಿ ಶೇ 50 ಅಂಕ ಪಡೆದಿರಬೇಕು’ ಎಂಬ ಹೊಸ ನಿಯಮ ಸೇರಿಸಿದೆ. ಪರಿಷ್ಕೃತ ನಿಯಮಾವಳಿಯ ಹೊಸ ಅಧಿಸೂಚನೆಯನ್ನು ಎನ್‌ಸಿಟಿಇ ಇತ್ತೀಚಿನ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದೆ. ದೇಶದ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಗುಣಮಟ್ಟದ ಶಿಕ್ಷಕರನ್ನು ನೇಮಕ ಮಾಡುವುದು ಈ ಹೊಸ ನಿಯಮದ ಉದ್ದೇಶವಾಗಿದೆ.

ಶಿಕ್ಷಕರಾಗಿ ನೇಮಕಗೊಂಡ ಎರಡು ವರ್ಷಗಳ ಒಳಗೆ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಮಿತಿ ಅನುಮೋದಿತ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ 6 ತಿಂಗಳ ಬ್ರಿಡ್ಜ್ ಕೋರ್ಸ್ (ಸೇತುಬಂಧ) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.