ಅಹಮದಾಬಾದ್: ನಟ ರಾಹುಲ್ ಬೋಸ್ ಎರಡು ಬಾಳೆ ಹಣ್ಣಿಗೆ ₹ 442 ಬೆಲೆತೆತ್ತು ಸುದ್ದಿಯಾಗಿದ್ದ ಬೆನ್ನಲ್ಲೆ,ಇದೀಗ ಕೇವಲ ಮೂರು ಮೊಟ್ಟೆಗೆ ಬಂದ ಬಿಲ್ ನೋಡಿ ಸಂಗೀತ ನಿರ್ದೇಶಕ ಶೇಖರ್ ರಾವ್ ಜಿಯಾನಿ ದಂಗಾಗಿದ್ದಾರೆ.

ಮೂರು ಮೊಟ್ಟೆಗಳಿಗೆ ಫೈವ್ ಸ್ಟಾರ್ ಹೋಟೆಲ್ ವಿಧಿಸಿದ್ದಬಿಲ್ ಅನ್ನು ಲಗತ್ತಿಸಿ ಟ್ವೀಟ್ ಮಾಡಿರುವ ರಾಹುಲ್, ಮೂರು ಮೊಟ್ಟೆಯ ಬಿಳಿ ಭಾಗಗಳಿಗೆ ₹1,672 ಬಿಲ್? ಅದೊಂದು 'ದುಬಾರಿ ಮೊಟ್ಟೆಯ ಊಟ' ಎಂದು ಒಕ್ಕಣೆನೀಡಿದ್ದಾರೆ.

ಈ ವರ್ಷದ ಜುಲೈನಲ್ಲಿ ಶೂಟಿಂಗ್ಗಾಗಿ ಚಂಡೀಗಢದ ಐಶಾರಾಮಿ ಹೋಟೆಲ್ನಲ್ಲಿ ತಂಗಿದ್ದ ನಟ ರಾಹುಲ್ ಬೋಸ್, ಎರಡು ಬಾಳೆಹಣ್ಣನ್ನು ಆರ್ಡರ್ ಮಾಡಿದ್ದರು. ಹೋಟೆಲ್ ಸಿಬ್ಬಂದಿ ಬಾಳೆಹಣ್ಣಿನ ಜತೆಗೆ ಬಿಲ್ ಅನ್ನು ತಂದುಕೊಟ್ಟಿದ್ದಾರೆ. ಅದನ್ನು ನೋಡಿದ ರಾಹುಲ್ ಬೋಸ್ ಫುಲ್ ಶಾಕ್ ಆಗಿದ್ದರು. ನಂತರ ಎರಡು ಬಾಳೆಹಣ್ಣಿಗೆ ಕಳುಹಿಸಿದ್ದ ಬಿಲ್ ಹಾಗೂ ದುಬಾರಿ ಬೆಲೆಯ ಹಣ್ಣಿನ ಬಗ್ಗೆ ಒಂದು ವಿಡಿಯೊಮಾಡಿ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಂತದ್ದೇ ಅನುಭವಗಳನ್ನು ಟ್ವೀಟಿಗರು ಬಿಚ್ಚಿಟ್ಟಿದ್ದರು. ಅದಾದ ಬಳಿಕ ದುಬಾರಿ ಬಿಲ್ ವಿಧಿಸಿದ ಹೋಟೆಲ್ಗೆ ಅಬಕಾರಿ ಮತ್ತು ತೆರಿಗೆ ಇಲಾಖೆ ₹ 25,000 ದಂಡ ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.