ಚೆನ್ನೈ: ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಚುನಾವಣಾ ಆಯೋಗವು ಅಧಿಕೃತವಾಗಿ ಗುರುತಿಸಿದೆ’ ಎಂದು ನಟ ವಿಜಯ್ ಅವರು ಭಾನುವಾರ ಘೋಷಿಸಿದ್ದಾರೆ. ‘ತಮಿಳುನಾಡಿನ ಪ್ರಮುಖ ಪಕ್ಷವಾಗಿ ‘ತಮಿಳಗ ವೆಟ್ರಿ ಕಳಗಂ’ ಹೊರಹೊಮ್ಮಲಿದೆ’ ಎಂದೂ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷವನ್ನು ನೋಂದಾಯಿಸಿಕೊಳ್ಳಲು ಕೋರಿ ವಿಜಯ್ ಅವರು ಇದೇ ವರ್ಷದ ಫೆಬ್ರುವರಿ 2ರಂದು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಜಯ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

‘ಯಶಸ್ಸಿನ ಮೊದಲ ಬಾಗಿಲು ತೆರೆದಿದೆ. ಪಕ್ಷವು ನಿರ್ದಿಷ್ಟ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲ ಸಂಕಷ್ಟಗಳನ್ನು ದಾಟಿ, ರಾಜ್ಯದ ಪ್ರಮುಖ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದೂ ಅವರು ಆಶಯ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಿದ್ಧಾಂತವು, ತತ್ವ ಆದರ್ಶಗಳು ಏನು ಎಂಬುದರ ಕುರಿತು ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡುವುದಾಗಿಯೂ ನಟ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.