ತಿರುವನಂತಪುರ: ಕೇರಳದ ಪಾಲಕ್ಕಾಡ್ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿದ್ದ ಹೋಟೆಲ್ ಕೊಠಡಿಗಳ ಮೇಲೆ, ಚುನಾವಣೆಗಾಗಿ ಅಕ್ರಮವಾಗಿ ಹಣ ಇಟ್ಟಿರುವ ಶಂಕೆಯಡಿ ಪೊಲೀಸರು ದಾಳಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ವರದಿ ಕೇಳಿದೆ.

ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ‘ನಿಯಮ ಉಲ್ಲಂಘಿಸಿ , ಪಕ್ಷದ ಮಹಿಳಾ ನಾಯಕಿಯರಿದ್ದ ಕೊಠಡಿಗಳ ಮೆಲೆ ದಾಳಿ ನಡೆಸಲು ಸಿಪಿಎಂ ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿದೆ’ ಎಂದು ಆರೋಪಿಸಿದ್ದರು.

ಹೀಗಾಗಿ, ಆಯೋಗವು ಜಿಲ್ಲಾ ಚುನಾವಣಾಧಿಕಾರಿಗಳಿಂದ ವರದಿಯನ್ನು ಕೇಳಿದೆ. ತಡರಾತ್ರಿ ಪೊಲೀಸರು ದಾಳಿ ನಡೆಸಲು ಸ್ಥಳೀಯ ಪಾಲಕ್ಕಾಡ್ ಕ್ಷೇತ್ರದ ಶಾಸಕರು ಆದ ಸಚಿವ ಎಂ.ಬಿ.ರಾಜೇಶ್ ಅವರ ಕುಮ್ಮಕ್ಕಿದೆ ಎಂದೂ ಸತೀಶನ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.