ಕೋಲ್ಕತ್ತ: ಕೋಲ್ಕತ್ತ ನಗರದ ಪುರಾತನ ಸಾರಿಗೆ ಟ್ರಾಂ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಕೋಲ್ಕತ್ತ ಜನರ ಸಂಚಾರಕ್ಕೆ ನಾಡಿಮಿಡಿತವಾಗಿದ್ದ ಈ ಟ್ರಾಂ ರೈಲು 1873ರಲ್ಲಿ ಆರಂಭವಾಗಿತ್ತು. ಇದೀಗ ರಸ್ತೆಗಳಲ್ಲಿ ವಾಹನ ದಟ್ಟಣೆಯುಂಟಾಗುತ್ತದೆ ಎನ್ನುವ ಕಾರಣಕ್ಕೆ ಬರೋಬ್ಬರಿ 150 ವರ್ಷಗಳ ಇತಿಹಾಸವಿರುವ ಈ ಸಾರಿಗೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಈ ಟ್ರಾಂ ರೈಲು ಪಟ್ನಾ, ಚೆನ್ನೈ, ನಾಸಿಕ್ ಮತ್ತು ಮುಂಬೈ ನಗರಗಳಲ್ಲಿ ಸಂಚರಿಸುತ್ತಿತ್ತು.

ಕೋಲ್ಕತ್ತದಲ್ಲಿ ಟ್ರಾಂ ರೈಲುಗಳ ಜಾರಿಗೆ ಬಂದಿದ್ದು ಹೇಗೆ?

1873ರ ಫೆಬ್ರುವರಿ 24ರಂದು ಈ ಟ್ರಾಂ ರೈಲುಗಳು ರಸ್ತೆಗಳಿದಿದ್ದವು. ಸಾಮಾನ್ಯ ರಸ್ತೆಗಳ ಮೇಲೆಯೇ ಈ ರೈಲುಗಳಿಗೆ ಹಳಿಗಳನ್ನು ನಿರ್ಮಿಸಲಾಗುತ್ತದೆ. ಹಳಿಗಳ ಮೇಲೆ ಇತರ ವಾಹನಗಳೂ ಸಂಚರಿಸಬಹುದು. ಆರಂಭದಲ್ಲಿ ಕುದುರೆಗಳ ಸಹಾಯದಿಂದ ರೈಲುಗಳನ್ನು ಚಲಿಸುತ್ತಿದ್ದವು. ಬಳಿಕ ಆಧುನೀಕರಣಗೊಂಡು 1900ರಲ್ಲಿ ಮೊದಲ ವಿದ್ಯುತ್ ಚಾಲಿತ ಟ್ರಾಂ ರೈಲು ಆರಂಭವಾಯಿತು. ಒಂದು ಶತಮಾನಗಳ ಕಾಲ ಚಲಿಸಿದ ಈ ರೈಲುಗಳಿಗೆ 2013ರಲ್ಲಿ ಎಸಿಯನ್ನು ಪರಿಚಯಿಸಲಾಯಿತು.

ಟ್ರಾಂ ರೈಲುಗಳ ಸಂಚಾರ ನಿಲ್ಲಿಸಿದ್ದು ಏಕೆ?

ಶತಮಾನಗಳ ಇತಿಹಾಸವಿರುವ ಸಾರಿಗೆ ಸೌಲಭ್ಯವನ್ನು ಅಂತ್ಯಗೊಳಿಸುವ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸ್ನೇಹಾಸಿಸ್ ಚಕ್ರವರ್ತಿ, ‘ಇಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ವೇಗದ ಸಾರಿಗೆಯ ಅಗತ್ಯ ಹೆಚ್ಚಿದೆ. ಟ್ರಾಂ ನಿಧಾನವಾಗಿ ಚಲಿಸುವ ವಾಹನವಾಗಿದೆ. ಇದರಿಂದಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಟ್ರಾಂ ಸೇವೆಯನ್ನು ಅಂತ್ಯಗೊಳಿಸಲಾಗುತ್ತಿದೆ. ಆದರೆ ಎಸ್ಪ್ಲಾನೇಡ್–ಮೈದಾನದ ನಡುವೆ ಟ್ರಾಂ ರೈಲು ಸಂಚರಿಸಲಿದೆ ಎಂದು ತಿಳಿಸಿದ್ದಾರೆ.

ಟ್ರಾಂ ರೈಲು ಸ್ಥಗಿತಕ್ಕೆ ವಿರೋಧ

ಕೋಲ್ಕತ್ತದಲ್ಲಿ ಟ್ರಾಂ ಸಂಚಾರವನ್ನು ಸ್ಥಗಿತಗೊಳಿಸದಿರುವಂತೆ ಹಲವು ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ಟ್ಯಾಗ್ ಅಭಿಯಾನವನ್ನು ಪ್ರಾರಂಭಿಸಿದೆ. ‘ಟ್ರಾಮ್ಗಳನ್ನು ಉಳಿಸಲು ನಾವು ಈ ವಾರದೊಳಗೆ ಚಳುವಳಿಯನ್ನು ಪ್ರಾರಂಭಿಸುತ್ತೇವೆ’ ಎಂದು ಕೋಲ್ಕತ್ತ ಟ್ರಾಂ ಬಳಕೆದಾರರ ಸಂಘ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.