ನವದೆಹಲಿ: ಚಂದ್ರಯಾನ–2 ಯೋಜನೆಯಲ್ಲಿನ ‘ಆರ್ಬಿಟರ್’ ಏಳು ವರ್ಷಗಳವರೆಗೂ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದ್ದಾರೆ.

ಆರಂಭದಲ್ಲಿ ‘ಆರ್ಬಿಟರ್’ ಕೇವಲ ಒಂದು ವರ್ಷ ಕಾರ್ಯನಿರ್ವಹಿಸಬಹುದು ಎಂದು ತಿಳಿಸಲಾಗಿತ್ತು. ಆದರೆ, ಈಗ ಏಳು ವರ್ಷ ಕಾರ್ಯನಿರ್ವಹಿಸಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರೀಕ್ಷಿಸಿದೆ ಎಂದು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಚಂದ್ರಯಾನ–2 ಅಪಾರ ಸಂಕೀರ್ಣವಾದ ಕಾರ್ಯಾಚರಣೆಯಾಗಿದೆ. ಈ ಯೋಜನೆಯು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಯೋಜನೆಯು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಚಂದ್ರಯಾನ–2 ಯೋಜನೆಯು ವೈಜ್ಞಾನಿಕ ಅಧ್ಯಯನ ನಡೆಸುವ ಉದ್ದೇಶವನ್ನು ಈ ಯೋಜನೆಯು ಈಡೇರಿಸಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿನ ವೈಜ್ಞಾನಿಕ ಸಂಶೋಧನೆಗಾಗಿ ಮಹತ್ವಾಕಾಂಕ್ಷೆ’ಯ ಚಂದ್ರಯಾನ–2 ನೌಕೆಯನ್ನು 2019ರ ಜುಲೈ 22ರಂದು ಉಡಾವಣೆ ಮಾಡಲಾಗಿತ್ತು. ಆದರೆ, 2019ರ ಸೆಪ್ಟೆಂಬರ್ 7ರಂದು ಚಂದ್ರನ ನೆಲದಲ್ಲಿ ಲ್ಯಾಂಡರ್ ಅಪ್ಪಳಿಸಿತು. ಹೀಗಾಗಿ, ಭಾರತ ಕಂಡ ಕನಸು ಈಡೇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.