ನವದೆಹಲಿ: ಈ ವರ್ಷಾಂತ್ಯಕ್ಕೆ ದೇಶವು ಮೊದಲ ಸ್ವದೇಶಿ ನಿರ್ಮಿತ ಸೆಮಿಕಂಡಕ್ಟರ್ ಚಿಪ್ ಲೋಕಾರ್ಪಣೆಗೆ ಸಾಕ್ಷಿಯಾಗಲಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ, ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಇದಕ್ಕೆ ಸಂಬಂಧಿಸಿದ ನೀತಿ ನಿರೂಪಣೆ ಮತ್ತು ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಿದೆ ಎಂದಿದ್ದಾರೆ.

ದೇಶದಲ್ಲಿ 3 ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.

ಬಳಿಕ, 1.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 3 ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದರು. ಗುಜರಾತ್‌ನಲ್ಲಿ 2 ಮತ್ತು ಅಸ್ಸಾಂನಲ್ಲಿ 1 ಘಟಕ ನಿರ್ಮಾಣವಾಗಲಿವೆ.

'2024ರ ಡಿಸೆಂಬರ್‌ಗೆ ನಾವು ಮೊದಲ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ ಹೊಂದಿರುತ್ತೇವೆ. 1962ರಲ್ಲಿ ದೇಶದಲ್ಲಿ ಚಿಪ್ ಉತ್ಪಾದನೆಯ ಮೊದಲ ಪ್ರಯತ್ನ ಮಾಡಲಾಗಿತ್ತು. ಸೂಕ್ತ ನೀತಿ ಮತ್ತು ಗಟ್ಟಿ ನಂಬಿಕೆ ಇಲ್ಲದ ಹೊರತು ಅದು ಸಾಧ್ಯವಿಲ್ಲ. ಈ ಬಗ್ಗೆ ಪ್ರಧಾನಿ ಮೋದಿಗೆ ಗಟ್ಟಿ ನಂಬಿಕೆ ಇದೆ. ವಿಕಸಿತ ಭಾರತದ ಯಶಸ್ಸಿಗಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳ ಅಗತ್ಯವಿದೆ ಎಂದು ಅವರು ನಂಬಿದ್ದಾರೆ. ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಖಚಿತಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಳಷ್ಟು ಗಮನ ಹರಿಸಿದ್ದಾರೆ’ ಎಂದು ಸಚಿವರು ಹೇಳಿದ್ದಾರೆ.

‘ಸೆಮಿಕಂಡಕ್ಟರ್ ಕುರಿತ ಚರ್ಚೆಗೆ ನಾವು 45 ನಿಮಿಷ ಸಮಯ ಕೇಳಿದರೆ, ಪ್ರಧಾನಿ ಮೋದಿ ಸುದೀರ್ಘ ಚರ್ಚೆ ನಡೆಸಲು 3 ಗಂಟೆ ನೀಡುತ್ತಿದ್ದರು. ವೈಯಕ್ತಿಕವಾಗಿ ಎಲ್ಲ ಇಲಾಖೆಗಳ ಜೊತೆ ಮಾತನಾಡಿ, ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ನಾವು ಯಶಸ್ಸು ಗಳಿಸಬೇಕು ಎಂದು ಹೇಳುತ್ತಿದ್ದರು’ಎಂದು ವೈಷ್ಣವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.