ಲಡಾಖ್: ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಸಿಕೊಳ್ಳುವ ಸಿಯಾಚಿನ್ ಗ್ಲೇಸಿಯರ್ನಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಟವರ್ಅನ್ನು ಸ್ಥಾಪಿಸಲಾಗಿದೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಭಾರತೀಯ ಸೇನೆಯ ಸಹಯೋಗದಲ್ಲಿ ಈ ಟವರ್ ಸ್ಥಾಪಿಸಲಾಗಿದೆ. ಇದರಿಂದಾಗಿ ಹಿಮಗಳ ನಡುವೆ ದೇಶ ಕಾಯುವ ಕೆಲಸದಲ್ಲಿ ತೊಡಗಿರುವ ಯೋಧರು ತಮ್ಮ ಪ್ರೀತಿ ಪಾತ್ರರೊಂದಿಗೆ ದೂರವಾಣಿ ಮೂಲಕ ಮಾತನಾಡಬಹುದಾಗಿದೆ.

ಈ ಬಗ್ಗೆ ಸಚಿವ ದೇವುಸಿಂಹ ಚೌಹಾಣ್ (Devusinh Chauhan) ಸೇರಿದಂತೆ ಹಲವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫೈರ್ ಫ್ಯೂರಿ ಕಾರ್ಪ್ಸ್ (@firefurycorps) ಅಧಿಕೃತ ಎಕ್ಸ್ ಖಾತೆ ಟವರ್ನ ಪೋಟೊ ಹಂಚಿಕೊಂಡು, ‘ಸಿಯಾಚಿನ್ ಯೋಧರು ಮತ್ತು ಬಿಎಸ್ಎನ್ಎಲ್ ಸಹಯೋಗದೊಂದಿಗೆ 15,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ನಿಯೋಜಿತಗೊಂಡ ಸೈನಿಕರಿಗೆ ಮೊಬೈಲ್ ಸಂವಹನವನ್ನು ಕಲ್ಪಿಸಲು ಅಕ್ಟೋಬರ್ 6 ರಂದು ಮೊಟ್ಟಮೊದಲ ಬಿಎಸ್ಎನ್ಎಲ್ ಟವರ್ ಮತ್ತು ಬೇಸ್ ಟ್ರಾನ್ಸಿವರ್ ಸ್ಟೇಷನ್ (ಬಿಟಿಎಸ್) ಅನ್ನು ಸ್ಥಾಪಿಸಿದೆ’ ಎಂದು ಬರೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.