ಗುವಾಹಟಿ: ಅಸ್ಸಾಂನ ಭೌಗೋಳಿಕ ಸ್ಥಳವನ್ನು ಅನುಕೂಲಕರ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿ ಬದಲಾಯಿಸುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅಸ್ಸಾಂ ಗವರ್ನರ್ ಜಗದೀಶ್ ಮುಖಿ ಹೇಳಿದರು.

ಇಲ್ಲಿ ನಡೆದ ಮೊಮೆಂಟಮ್ ನಾರ್ತ್ ಈಸ್ಟ್ 2023ರ ಎರಡನೇ ಆವೃತ್ತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಶಾನ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಬಿಬಿಎನ್ (ಬಾಂಗ್ಲಾದೇಶ, ಭೂತನ್, ನೇಪಾಳ) ದೇಶಗಳೊಂದಿಗೆ ಹಂಚಿಕೊಂಡಿರುವ ಅಂತರರಾಷ್ಟ್ರೀಯ ಗಡಿಯಿಂದಾಗಿ ಭೌಗೋಳಿಕ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಈಶಾನ್ಯ ರಾಜ್ಯಗಳು ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಬಹುಪಕ್ಷೀಯ ವ್ಯಾಪಾರ ಪಾಲುದಾರಿಕೆಗೆ ಅವಕಾಶಗಳನ್ನು ಪಡೆದುಕೊಳ್ಳಲು ಭಾರತದ ಜಿ 20 ಅಧ್ಯಕ್ಷ ಸ್ಥಾನವು ಮಹತ್ತರ ಬೆಳವಣಿಗೆಯಾಗಿದೆ. ಅಸ್ಸಾಂ, ಈಶಾನ್ಯ ರಾಜ್ಯಗಳಿಗೆ ಕೇಂದ್ರವಾಗಿದ್ದು, ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಹಲವಾರು G20 ಕಾರ್ಯಕ್ರಮಗಳನ್ನು ಅಸ್ಸಾಂನಲ್ಲಿ ಆಯೋಜಿಸಲಾಗುವುದು ಎಂದು ಸೂಚಿಸಿದ ಮುಖಿ, ಜಾಗತಿಕ ಮತ್ತು ಸ್ಥಳೀಯ ಹೂಡಿಕೆದಾರರಿಗೆ ಈಶಾನ್ಯ ಪ್ರದೇಶದ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಕೇಂದ್ರದ 'ಆಕ್ಟ್ ಈಸ್ಟ್ ಪಾಲಿಸಿ'ಯಿಂದ ಈಶಾನ್ಯ ರಾಜ್ಯಗಳ ಅಭಿವೃದ್ಧಿ ವೇಗವಾಗಿ ಹಾಗೂ ಶಕ್ತಿಯುತವಾಗಿ ಆಗಲೂ ಸಹಾಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಭೂತಾನ್ನ ಕಾನ್ಸುಲ್ ಜನರಲ್ ಜಿಗ್ಮೆ ಥಿನ್ಲೆ ನಾಮ್ಗ್ಯಾಲ್ ಮತ್ತು ಬಾಂಗ್ಲಾದೇಶದ ಸಹಾಯಕ ಹೈ ಕಮಿಷನರ್ ರುಹುಲ್ ಅಮೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನು ಓದಿ: ಗರ್ಭಿಣಿಯಾಗಲು ಮಾನವನ ಮೂಳೆ ತಿನ್ನುವಂತೆ ಒತ್ತಡ: ಗಂಡ, ಅತ್ತೆ ವಿರುದ್ಧ ಪ್ರಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.